ಮೂಡುಬಿದಿರೆ: ವೇಣೂರಿನ ಬ್ರೈಟ್ ಹೊರೈಝನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆಗಸ್ಟ್‌ 5ರಂದು ಶಾಲೆಯ ಮಾಸಿಕ ನಿಯತಕಾಲಿಕೆ ‘ವಿಂಗ್ಸ್ ಆಫ್ ವಿಸ್ಡಮ್’ ಲೋಕಾರ್ಪಣೆ ನಡೆಯಿತು. ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿ, ಬರವಣಿಗೆ ಕೌಶಲ್ಯ ಮತ್ತು ಸೃಜನಶೀಲ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿರುವ ಈ ನಿಯತಕಾಲಿಕೆಯನ್ನು ಶಶಿಧರ ಶೆಟ್ಟಿ ಬರೋಡಾ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಶಶಿಧರ ಶೆಟ್ಟಿ ಬರೋಡಾ, ವಿದ್ಯಾರ್ಥಿಗಳಲ್ಲಿರುವ ಸಾಹಿತ್ಯಾಭಿರುಚಿ ಮತ್ತು ಸೃಜನಶೀಲತೆಯನ್ನು ಗುರುತಿಸಿ ಬೆಳೆಸುವಲ್ಲಿ ಇಂತಹ ಮಾಸಿಕ ನಿಯತಕಾಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಸಮಾಜದ ಮುಂದೆ ಪರಿಚಯಿಸುವ ಉತ್ತಮ ವೇದಿಕೆಯಾಗಿರುವ ಈ ಪ್ರಯತ್ನ ಶ್ಲಾಘನೀಯವಾಗಿದ್ದು, ಬರವಣಿಗೆಯ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸವೂ ವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶಾಲೆಯ ಅಧ್ಯಕ್ಷ ಡಾ. ಶರತ್ ಗೋರೆ, ಪ್ರಾಂಶುಪಾಲ ಡಾ. ಶಶಿಧರ್, ಕಾರ್ಯದರ್ಶಿ ಶಾಂಭವಿ ಗೋರೆ, ಯು.ಕೆ. ಕನ್ಸ್ಟ್ರಕ್ಷನ್‌ನ ಮಾಲೀಕ ಮಹಮ್ಮದ್ ಇರ್ಫಾನ್, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.