ಮೂಡುಬಿದಿರೆ: ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಹಾಗೂ ಮೂಡುಕೊಣಾಜೆ ಗ್ರಾಮದ ‘ವಿಶ್ವಶೀಲ’ ನಿವಾಸಿ ಕೆ. ವಿಶ್ವನಾಥ ಶೆಟ್ಟಿ (86) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು.

ಕೆ. ವಿಶ್ವನಾಥ ಶೆಟ್ಟಿ ಐದು ವರ್ಷಗಳ ಕಾಲ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.