ಮೂಡುಬಿದಿರೆ: ಮೂಡುಬಿದಿರೆ ಅಡ್ವೆಂಚರ್ ಡ್ರೈವ್ 2026ರ 5ನೇ ಆವೃತ್ತಿಯ ಟೈಮ್ ಸ್ಪೀಡ್ ಡಿಸ್ಟೆನ್ಸ್ ಕಾರು ರ‍್ಯಾಲಿಗೆ ಶನಿವಾರ ಸಂಜೆ ಶ್ರೀ ಮಹಾವೀರ ಕಾಲೇಜು ಕ್ಯಾಂಪಸ್‌ನಲ್ಲಿ ಚಾಲನೆ ನೀಡಲಾಯಿತು.

ತ್ರಿಭುವನ್ ಆಟೋಮೊಟಿವ್ ಸ್ಪೋರ್ಟ್ಸ್ ಕ್ಲಬ್, ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ನಮ್ಮ ಮೂಡುಬಿದಿರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಮಾರ್ಗದರ್ಶನದಲ್ಲಿ ರ‍್ಯಾಲಿ ಆಯೋಜಿಸಲಾಗಿದೆ.

ಮಾಜಿ ಸಚಿವ ಅಭಯಚಂದ್ರ ಜೈನ್ ರ‍್ಯಾಲಿಗೆ ಚಾಲನೆ ನೀಡಿದರು. ಯುವಜನತೆ ರ‍್ಯಾಲಿಯಲ್ಲಿ ಉತ್ಸಾಹದಿಂದ ಭಾಗವಹಿಸುವುದರ ಜತೆಗೆ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಬೇಕು. ಎಚ್ಚರಿಕೆಯಿಂದ ವಾಹನ ಚಲಾಯಿಸಿ ರ‍್ಯಾಲಿಯನ್ನು ಆನಂದಿಸಬೇಕು ಎಂದು ಹೇಳಿದರು. ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶ್ವಿನ್ ನಾಯಕ್ ರ‍್ಯಾಲಿಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ಮಾನದಂಡಗಳ ಕುರಿತು ಮಾಹಿತಿ ನೀಡಿದರು.

ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ವೀಕ್ಷಕ ಲ್ಯಾನ್ಸಿ ಸಲ್ಡಾನ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಆಯೋಜನಾ ಸಮಿತಿ ಅಧ್ಯಕ್ಷ ಅಕ್ಷಯ್ ಜೈನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಎಕ್ಸ್ಪರ್ಟ್, ನವೀಸ್, ಡಾಕ್ಟರ್ಸ್, ಸ್ಟೂಡೆಂಟ್ಸ್, ಲೇಡೀಸ್, ಕಪಲ್ಸ್, ಕಾರ್ಪೊರೇಟ್, ಬೆದ್ರ ಲೋಕಲ್, ಕ್ಲಬ್ ಹಾಗೂ ಮೂಡುಬಿದಿರೆ ರ‍್ಯಾಲಿ ಸ್ಟಾರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ತಮಿಳುನಾಡು, ಕೇರಳ, ಮುಂಬೈ, ಚಿಕ್ಕಮಗಳೂರು, ಮಡಿಕೇರಿ, ಬೆಂಗಳೂರು ಸೇರಿದಂತೆ ವಿವಿಧೆಡೆಯ ರ‍್ಯಾಲಿ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.