ಕಟೀಲು : ರಾಮ್ ಫ್ರೆಂಡ್ಸ್ ಕಟೀಲು ತಂಡದ 7ನೇ ವರ್ಷದ ಆಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮ ಹೊಸ ಬೆಳಕು ಸೇವಾ ಟ್ರಸ್ಟ್ ಬೈಲೂರಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಂಚಶಕ್ತಿ ಎಂಟರ್ಪ್ರೈಸಸ್ ಮಾಲಕರಾದ ರಂಜಿತ್ ಪೂಜಾರಿ ತೋಡಾರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಆಶ್ರಮಕ್ಕೆ ₹10 ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಅಗತ್ಯವಿರುವ ₹40 ಸಾವಿರ ಮೌಲ್ಯದ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು. ಎರಡು ಅಶಕ್ತ ಕುಟುಂಬಗಳಿಗೆ ತಲಾ ₹10 ಸಾವಿರದಂತೆ ಒಟ್ಟು ₹20 ಸಾವಿರ ಸಹಾಯಧನ ವಿತರಿಸಲಾಯಿತು. ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡ ಸೇವಾ ತಂಡಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಕಲಾ ಕನ್‌ಸ್ಟ್ರಕ್ಷನ್ ಕಟೀಲು ಇದರ ಮಾಲಕರಾದ ಲೋಕಯ್ಯ ಸಾಲ್ಯಾನ್ ಕೊಂಡೇಲ, ಬಿರುವೆರ್ ಕುಡ್ಲ ಬಜಪೆ ಘಟಕ ಅಧ್ಯಕ್ಷರಾದ ಚಂದ್ರ ಪೂಜಾರಿ ಬಜ್ಪೆ, ಕಾರ್ಕಳ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಪಿ.ಎಸ್.ಐ, ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್, ರಾಮ್ ಫ್ರೆಂಡ್ಸ್ ಕಟೀಲು ತಂಡದ ಸ್ಥಾಪಕ ಅಧ್ಯಕ್ಷರಾದ ರಮಾನಂದ ಪೂಜಾರಿ ಕಟೀಲು ಹಾಗೂ ತಂಡದ ಪದಾಧಿಕಾರಿಗಳು ಮತ್ತು ನಿಸ್ವಾರ್ಥ ಸೇವಾ ಬಂಧುಗಳು ಉಪಸ್ಥಿತರಿದ್ದರು.

ತಂಡದ ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗಮಿಜಾರು ಅತಿಥಿಗಳನ್ನು ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.