ಮೂಡುಬಿದಿರೆ: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಮೂಡುಬಿದಿರೆ ತಾಲೂಕು ಘಟಕದ ಮಾಸಿಕ ಸಭೆ ಹಾಗೂ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಕಾರ್ಯಕ್ರಮ ಮಾಸ್ತಿಕಟ್ಟೆ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಶಿವರಾಮ್ ಆನಡ್ಕ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘದ ಸ್ಥಾಪಕ ಮುಖಂಡ ಎಂ ಶೀನ ಮಾಸ್ತಿಕಟ್ಟೆ , ಗೌರವಾಧ್ಯಕ್ಷ ಶ್ರೀನಿವಾಸ್ ಪಾಳ್ಯ, ಪ್ರಾಂಶುಪಾಲ ಸೋಮಪ್ಪ ಅಲಂಗಾರ್ , ರಾಜ್ಯ ಸಮಿತಿ ಸದಸ್ಯ ಸುರೇಶ್ ಪಿ.ಬಿ., ಮಹಿಳಾ ಸಮಿತಿ ಅಧ್ಯಕ್ಷೆ ಕುಸುಮ, ಉಪಾಧ್ಯಕ್ಷ ಬಾಬು ಅಳಿಯೂರು ಹಾಗೂ ಮಹಿಳಾ ಸಮಿತಿ ಕಾರ್ಯದರ್ಶಿ ಸುನೀತಾ ಉಪಸ್ಥಿತರಿದ್ದರು.

ಸಹ ಕಾರ್ಯದರ್ಶಿ ಗಣೇಶ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಬಳಿಕ ಆಟಿ ತಿಂಗಳ ವಿಶೇಷ ಸಿಹಿ ಹಾಗೂ ವಿವಿಧ ತಿಂಡಿ ತಿನಿಸುಗಳನ್ನು ಸವಿಯಲಾಯಿತು. ಇದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.