ಮೂಡುಬಿದಿರೆ: ತುಳುನಾಡಿನ ಸಾಂಪ್ರದಾಯಿಕ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಪಾಲೆಕೆತ್ತೆ ಕಷಾಯ ವಿತರಣೆ ಬುಧವಾರ ಮುಂಜಾನೆ ಮೂಡುಬಿದಿರೆಯ ವಲಯ ಅರಣ್ಯಾಧಿಕಾರಿ ಕಚೇರಿ ರಸ್ತೆಯ ಛಾಯಾ ಕಂಪ್ಯೂಟರ್ ಕೇಂದ್ರದಲ್ಲಿ ನಡೆಯಿತು.
ವಿಶ್ವ ತುಳುವೇರ್ ಸಂಘಟನೆ, ಮಂಗಳೂರು ಹಾಗೂ ಎಕ್ಸಲೆಂಟ್ ಪಿ.ಯು. ಕಾಲೇಜು, ಕಲ್ಲಬೆಟ್ಟು ಇವರ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಸಂಘಟನೆಯ ದಯಾನಂದ ಹಾಗೂ ಬಳಗದವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಪರಿಸರದ ನೂರಾರು ಮಂದಿ ಪಾಲೆಕೆತ್ತೆ ಕಷಾಯ ಹಾಗೂ ಮೆಂತೆಗಂಜಿಯನ್ನು ಪ್ರಸಾದ ರೂಪದಲ್ಲಿ ಸೇವಿಸಿದರು. ತುಳುನಾಡಿನ ಸಾಂಪ್ರದಾಯಿಕ ಆಹಾರ ಮತ್ತು ಔಷಧೀಯ ಪದ್ಧತಿಗಳ ಪರಿಚಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಪಾಲೆಕೆತ್ತೆ ಕಷಾಯ ವಿತರಣೆ ಗಮನ ಸೆಳೆಯಿತು.
ವರದಿ: ಮುನಿಯಾಲ ದೇವದಾಸ ಕಿಣಿ