ಮೂಡುಬಿದಿರೆ: ಜೆಕೆ ಮೋಡಲ್ ಮ್ಯಾನೇಜ್ಮೆಂಟ್ ಪ್ರಾಯೋಜಕತ್ವದಲ್ಲಿ ಬೋಳೂರು ಸುಲ್ತಾನ್ ಬತ್ತೇರಿಯಲ್ಲಿ ನಡೆದ ಮಿಸ್ ಐಎಕ್ಸ್ಇ-2026 ಸೌಂದರ್ಯ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಹರ್ಷಿತಾ ಅಶ್ವಥ್ ಮೂಡುಕೊಣಾಜೆ ವಿಜೇತ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೋಳೂರು ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಸ್ಪರ್ಧಿಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದರು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ಹರ್ಷಿತಾ ಅಶ್ವಥ್ ನಿರ್ಣಾಯಕರ ಮೆಚ್ಚುಗೆಗೆ ಪಾತ್ರರಾಗಿ ಮಿಸ್ ಐಎಕ್ಸ್ಇ-2026 ಪಟ್ಟ ಗೆದ್ದರು. ಹರ್ಷಿತಾ ಅಶ್ವಥ್ ಮಿಜಾರಿನ ಧರ್ಮಣ ಕುಸುಮಾವತಿ ದಂಪತಿಯ ಪುತ್ರಿಯಾಗಿದ್ದು, ಮೂಡುಕೊಣಾಜೆಯ ಅಶ್ವಥ್ ಅವರ ಪತ್ನಿ.