ಮೂಡುಬಿದಿರೆ: ಕಲ್ಲಮುಂಡ್ಕೂರು ರವಿದಾಸ್ ಕಾಮತ್ ಪುತ್ರ, ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್(52) ಗುರುವಾರ ಬೆಳಗ್ಗೆ ನಿಧನರಾದರು. ಗಣೇಶ್ ಕಾಮತ್ ಕಲ್ಲಮುಂಡ್ಕೂರಿನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು ಹಾಗೂ ಪತ್ರಿಕೆಯ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಾನಿಯಾಗಿದ್ದ ಅವರು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ತಾಯಿ, ಪತ್ನಿ, ಪುತ್ರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ಇಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಲ್ಲಮುಂಡ್ಕೂರು: ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್ ನಿಧನ
ಕಲ್ಲಮುಂಡ್ಕೂರು: ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್ ನಿಧನ