ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ಎರಡನೇ ಆವೃತ್ತಿಯ ಫಲಿತಾಂಶದಲ್ಲಿ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿ ನಾಗದೇವ್ ಎಂ.ಜಿ. ಬಿ.ಪ್ಲಾನಿಂಗ್ ವಿಭಾಗದ ಜನರಲ್ ಇಡಬ್ಲ್ಯೂಎಸ್ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ವಿದ್ಯಾರ್ಥಿ ಬಿ.ಆರ್ಕ್ ವಿಭಾಗದಲ್ಲಿ ದೇಶಕ್ಕೆ ಐದನೇ ರ‍್ಯಾಂಕ್ ಪಡೆದಿದ್ದು, ಗಣಿತದಲ್ಲಿ 100 ಪರ್ಸೆಂಟೈಲ್‌ನೊಂದಿಗೆ ಒಟ್ಟಾರೆ 99.8894999 ಪರ್ಸೆಂಟೈಲ್ ಗಳಿಸಿದ್ದಾರೆ.
ಬಿ.ಪ್ಲಾನಿಂಗ್ ವಿಭಾಗದಲ್ಲಿ ನಾಗದೇವ್ ಎಂ.ಜಿ. (99.9762662), ಸುಕ್ಷಿತ್ ಗಿರೀಶ್ ಗೌಡ (99.7769023), ನಮಿತ್ ಕೃಷ್ಣಮೂರ್ತಿ ಹೆಗಡೆ (99.4570078), ವಿಶ್ವೇಶ್ ಎನ್.ಹೆಚ್. (99.3484094), ನಿಶಾಂತ್ ಹೊನ್ನಾವರ್ (99.3164686) ಸೇರಿದಂತೆ ಐದು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ. ಅನಿರುಧ್ ಉಪಾಧ್ಯಾಯ (98.8948512), ಅಭಿರಾಮ್ ಭಟ್ ಜಿ.ಪಿ. (98.3718612), ಉಲ್ಲಾಸ್ ವೈ ಪಾಟೀಲ್ (98.2560368), ದಿಶಾಂತ್ ಎಂ. (98.2152181), ವೃಷಬ್ ಮಂಜುನಾಥ್ ಬೆನ್ನಿ (98.1666028), ಸಂವಿತ್ ಅಮಿತ್ ಗೋಕರ್ಣ (98.1107894) ಹಾಗೂ ನಿನಾದ್ ರಾಜೇಶ್ ನಾಯಕ್ (98.0490815) ಉತ್ತಮ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಒಟ್ಟು 12 ವಿದ್ಯಾರ್ಥಿಗಳು 98ಕ್ಕಿಂತ ಹೆಚ್ಚು, 16 ವಿದ್ಯಾರ್ಥಿಗಳು 97ಕ್ಕಿಂತ ಹೆಚ್ಚು, 22 ವಿದ್ಯಾರ್ಥಿಗಳು 95ಕ್ಕಿಂತ ಹೆಚ್ಚು ಹಾಗೂ 31 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಅಧಿಕ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಿ.ಆರ್ಕ್ ವಿಭಾಗದಲ್ಲಿ ಅನಿರುಧ್ ಉಪಾಧ್ಯಾಯ (98.296243) ಮತ್ತು ವಿಶ್ವೇಶ್ ಎನ್ ಹೆಚ್ (98.1317778) ಗಮನಾರ್ಹ ಅಂಕ ಗಳಿಸಿದ್ದಾರೆ. ಈ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು 98ಕ್ಕಿಂತ ಹೆಚ್ಚು, 11 ವಿದ್ಯಾರ್ಥಿಗಳು 97ಕ್ಕಿಂತ ಹೆಚ್ಚು, 20 ವಿದ್ಯಾರ್ಥಿಗಳು 95ಕ್ಕಿಂತ ಹೆಚ್ಚು ಹಾಗೂ 40 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಸುಮಂತ್ ದಾಮ್ಲೆ, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.