ಮೂಡುಬಿದಿರೆ: ಮಂಗಳವಾರ ರಾತ್ರಿ ಅಬ್ಬರಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಅಲಂಗಾರು ಹೋಲಿ ರೋಸರಿ ಚರ್ಚ್ ಸಂಕೀರ್ಣ ಮತ್ತು ವಠಾರದಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಬಿರುಗಾಳಿಯ ರಭಸಕ್ಕೆ ಚರ್ಚ್ ವಠಾರದಲ್ಲಿರುವ ಕಟ್ಟಡದ ಮೇಲ್ಛಾವಣಿಯ ಹೆಂಚುಗಳು ಹಾರಿ ಹೋಗಿದ್ದು, ಆವರಣದಲ್ಲಿದ್ದ ಮರಗಿಡಗಳು ಬುಡಮೇಲಾಗಿ ಬಿದ್ದಿವೆ. ಈ ಅನಿರೀಕ್ಷಿತ ಪ್ರಾಕೃತಿಕ ವಿಕೋಪದಿಂದ ಚರ್ಚ್ ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿದೆ.