ಮೂಡುಬಿದಿರೆ:ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಇರುವೈಲು ಗ್ರಾಮದ ಪರಾರಿಯಲ್ಲಿ ರಮೇಶ್ ಪ್ರಭು ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಅಪಾರ ನಷ್ಟ ಸಂಭವಿಸಿದೆ. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಗಾಳಿ ಮಳೆಯ ಹೊಡೆತಕ್ಕೆ ಸಿಲುಕಿ ಮನೆಯ ಬಳಿಯಿದ್ದ ವಿದ್ಯುತ್ ಕಂಬವು ಗೋಡೆಯ ಮೇಲೆ ಕುಸಿದಿದೆ. ಕಂಬದ ತಂತಿಗಳು ಎಳೆಯಲ್ಪಟ್ಟ ಕಾರಣ ಮನೆಯ ಗೋಡೆಯ ಒಂದು ಭಾಗ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.