ಮೂಡುಬಿದಿರೆ: ನೆಲ್ಲಿಕಾರು ಪರಿಸರದಲ್ಲಿ ಬೀಸಿದ ಭಾರಿ ಗಾಳಿ ಮಳೆಗೆ ಎರಡು ಮನೆಗಳಿಗೆ ಹಾನಿಯಾದ ಘಟನೆ ಸಂಭವಿಸಿದೆ. ನೆಲ್ಲಿಕಾರು ನಿವಾಸಿ ನಜೀರ್ ಎಂಬವರ ಮನೆ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಗೆ ಭಾರೀ ಹಾನಿಯಾಗಿದೆ. ಅದೇ ರೀತಿ ಮಾಂಟ್ರಾಡಿ ನಿವಾಸಿ ಸಂತೋಷ್ ಕೋಟ್ಯಾನ್ ಅವರ ಮನೆಗೂ ಹಾನಿಯುಂಟಾಗಿದ್ದು, ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.