ಮೂಡುಬಿದಿರೆ: ಸ್ಥಳೀಯ ಪೊಲೀಸ್ ಠಾಣೆಯ ನೂತನ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ರಾಜೇಂದ್ರ ಬಿ. ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಕಳೆದ ಎರಡು ತಿಂಗಳಿನಿಂದ ತೆರವಾಗಿದ್ದ ಇನ್ಸ್‌ಪೆಕ್ಟರ್ ಹುದ್ದೆ ಇವರ ನೇಮಕದೊಂದಿಗೆ ಭರ್ತಿಯಾಗಿದೆ. ರಾಜೇಂದ್ರ ಬಿ. ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆ ಮತ್ತು ಮಂಗಳೂರು ಸಿಸಿಬಿಯಲ್ಲಿ ಉಪನಿರೀಕ್ಷಕರಾಗಿ ಹಾಗೂ ಮಂಗಳೂರು ಸಿಸಿಆರ್‌ಬಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.