ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ನಡೆಯಲಿರುವ ಅಂಡರ್ 14 ಕ್ರಿಕೆಟ್ ತಂಡಕ್ಕೆ ಮೂಡುಬಿದಿರೆಯ ಪರಮ್ ಜೈನ್ ಆಯ್ಕೆಯಾಗಿದ್ದಾರೆ.
2025ರಲ್ಲಿ ಆರಂಭವಾದ ಮೂಡುಬಿದಿರೆ ಸ್ಪೋರ್ಟ್ಸ್ ಅಕಾಡೆಮಿಯ ಸದಸ್ಯರಾಗಿರುವ ಪರಮ್ ಜೈನ್, ಅಕಾಡೆಮಿ ಆರಂಭವಾದ ಒಂದು ವರ್ಷದ ಅವಧಿಯಲ್ಲೇ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿರುವುದು ವಿಶೇಷವಾಗಿದೆ. ಸಂಪತ್ ಕುಮಾರ್ ಜೈನ್ ಮತ್ತು ಪದ್ಮಪ್ರಿಯ ದಂಪತಿಯ ಪುತ್ರರಾಗಿರುವ ಪರಮ್ ಜೈನ್ ತಮ್ಮ ಶಿಸ್ತು ಮತ್ತು ಕ್ರೀಡಾ ಉತ್ಸಾಹದ ಮೂಲಕ ಅಕಾಡೆಮಿ ಹಾಗೂ ಮೂಡುಬಿದಿರೆಗೆ ಕೀರ್ತಿ ತಂದಿದ್ದಾರೆ. ಪರಮ್ ಜೈನ್ ಸಾಧನೆಯನ್ನು ಮೂಡುಬಿದಿರೆ ಸ್ಪೋರ್ಟ್ಸ್ ಅಕಾಡೆಮಿ ಶ್ಲಾಘಿಸಿದರು.
ಅಂಡರ್ 14 ಕ್ರಿಕೆಟ್: ಜಿಲ್ಲಾ ತಂಡಕ್ಕೆ ಮೂಡುಬಿದಿರೆ ಸ್ಪೋರ್ಟ್ಸ್ ಅಕಾಡೆಮಿಯ ಪರಮ್ ಜೈನ್ ಆಯ್ಕೆ
ಅಂಡರ್ 14 ಕ್ರಿಕೆಟ್: ಜಿಲ್ಲಾ ತಂಡಕ್ಕೆ ಮೂಡುಬಿದಿರೆ ಸ್ಪೋರ್ಟ್ಸ್ ಅಕಾಡೆಮಿಯ ಪರಮ್ ಜೈನ್ ಆಯ್ಕೆ