ಮೂಡುಬಿದಿರೆ: ಭಾರತದ ಕ್ರೀಡಾ ಸ್ಪೂರ್ತಿಯನ್ನು ಅನಾವರಣಗೊಳಿಸುವ ಇಶಾ ಗ್ರಾಮೋತ್ಸವದ ಅಂಗವಾಗಿ ಗ್ರಾಮೀಣ ಮಹಿಳೆಯರಿಗಾಗಿ ಉಚಿತ ವಾಲಿಬಾಲ್ ಮತ್ತು ಥ್ರೋಬಾಲ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಇಶಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಶಿಬಿರವು ಮೇ 20 ರಿಂದ 24 ರವರೆಗೆ ಲ ಪ್ರತಿದಿನ ಸಂಜೆ 4 ರಿಂದ 6 ರವರೆಗೆ ನಡೆಯಲಿದೆ. 14 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಗ್ರಾಮೀಣ ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ತರಬೇತಿ ಶಿಬಿರವು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪರಿಣಿತ ತರಬೇತುದಾರರಿಂದ ವಿಶೇಷ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವ ಪ್ರತಿಭಾವಂತ ಮಹಿಳಾ ಆಟಗಾರರನ್ನು ಗುರುತಿಸಲಾಗುವುದು. ಇಶಾ ಗ್ರಾಮೋತ್ಸವಕ್ಕೆ ಆಯ್ಕೆಯಾಗುವ ತಂಡಗಳಿಗೆ ಒಟ್ಟು 5 ಲಕ್ಷ ರೂಪಾಯಿ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವಿದೆ. ಆಸಕ್ತರು https://isha.co/grm-camp ಲಿಂಕ್ ಬಳಸಿ ಇಂದೇ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9741343317 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಶಾ ಗ್ರಾಮೋತ್ಸವ: ಮೂಡುಬಿದಿರೆಯಲ್ಲಿ ಮೇ 20 ರಿಂದ ಉಚಿತ ಕ್ರೀಡಾ ತರಬೇತಿ ಶಿಬಿರ
ಇಶಾ ಗ್ರಾಮೋತ್ಸವ: ಮೂಡುಬಿದಿರೆಯಲ್ಲಿ ಮೇ 20 ರಿಂದ ಉಚಿತ ಕ್ರೀಡಾ ತರಬೇತಿ ಶಿಬಿರ