ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಮಾರೂರಿನಲ್ಲಿ ಬೀಸಿದ ಭಾರಿ ಗಾಳಿಗೆ 5 ಸೆಂಟ್ಸ್ ಕಾಲನಿಯ ಕುಸುಮ ಎಂಬುವವರ ಮನೆಯ ಮಾಡಿನ ಸಿಮೆಂಟ್ ಶೀಟ್ ಹಾರಿ ಹೋಗಿ ಹಾನಿಯಾಗಿದೆ. ಕಲ್ಲಬೆಟ್ಟು, ಕರಿಂಜೆ ಮತ್ತು ಬಂಗಾಲಪದವಿನಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.