ಮೂಡುಬಿದಿರೆ: ಮೂಡುಮಾರ್ನಾಡು ಸಮೀಪದ ಗುಂಡುಕಲ್ಲು ನಿವಾಸಿ, ಮೀನು ವ್ಯಾಪಾರಿ ಬದ್ರುದ್ದೀನ್ (51) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾದರು. ಬದ್ರು ಎಂದೇ ಖ್ಯಾತರಾಗಿದ್ದ ಬದ್ರುದ್ದೀನ್ ಅವರು ಮೀನು ವ್ಯಾಪಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.