ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ-ಬೆಳುವಾಯಿ ಮಾರ್ಗದಲ್ಲಿ ಬೈಕ್ ಸವಾರನೊಬ್ಬ ಹ್ಯಾಂಡಲ್ ಬಾರ್‌ನಿಂದ ಎರಡು ಕೈಗಳನ್ನು ಬಿಟ್ಟು, ಡಾನ್ಸ್ ಹಾಗೂ ವಿವಿಧ ಸನ್ನೆಗಳನ್ನು ಮಾಡುತ್ತಾ ಯದ್ವಾತದ್ವಾ ವಾಹನ ಚಲಾಯಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾನೆ. ಈ ಮಾರ್ಗವು ಈಗಾಗಲೇ ಅಪಘಾತ ವಲಯ ಎಂದು ಗುರುತಿಸಲ್ಪಟ್ಟಿದ್ದು, ಇಂತಹ ಬೇಜವಾಬ್ದಾರಿಯ ಚಾಲನೆ ತೀವ್ರ ಆತಂಕ ಮೂಡಿಸಿದೆ. ಕಾರಿನಲ್ಲಿ ಸಾಗುತ್ತಿದ್ದ ಯುವಕರು ಬೈಕ್ ಸವಾರನ ಈ ಅಪಾಯಕಾರಿ ಚಲನೆಯನ್ನು ವಿಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ಬೈಕ್ ನಿಲ್ಲಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆಯಲ್ಲಿ ಇಂತಹ ಹುಚ್ಚಾಟಗಳು ಹೆಚ್ಚಾಗುತ್ತಿದ್ದು, ಇದು ಸವಾರನ ಅಥವಾ ಇತರ ವಾಹನ ಸವಾರರ ಜೀವಕ್ಕೆ ಹಾನಿ ತರಬಹುದು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಯುವಕರು ಮೂಡುಬಿದಿರೆ ಠಾಣೆ ದೂರು ನೀಡಿದ್ದಾರೆ.
ಅಪಘಾತ ವಲಯ ಬನ್ನಡ್ಕ-ಬೆಳುವಾಯಿ ಮಾರ್ಗದಲ್ಲಿ ಬೈಕ್ ಸವಾರನ ಹುಚ್ಚಾಟ: ಬೇಜವಾಬ್ದಾರಿತನಕ್ಕೆ ಆಕ್ರೋಶ
ಅಪಘಾತ ವಲಯ ಬನ್ನಡ್ಕ-ಬೆಳುವಾಯಿ ಮಾರ್ಗದಲ್ಲಿ ಬೈಕ್ ಸವಾರನ ಹುಚ್ಚಾಟ: ಬೇಜವಾಬ್ದಾರಿತನಕ್ಕೆ ಆಕ್ರೋಶ