ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜು ತಂಡವನ್ನು ಸೋಲಿಸುವ ಮೂಲಕ ಆಳ್ವಾಸ್ ಕಾಲೇಜು ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ವಿಜೇತ ತಂಡದ ಪಲ್ಲವಿ ಉತ್ತಮ ಬ್ಯಾಟರ್, ನಳಿನಾಕ್ಷಿ ಉತ್ತಮ ವಿಕೆಟ್ ಕೀಪರ್ ಮತ್ತು ಕೃಪಾ ಉತ್ತಮ ಆಲ್‌ರೌಂಡರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಮಂಗಳೂರು ವಿವಿ ಕ್ರಿಕೆಟ್ ಪಂದ್ಯಾವಳಿ: ಆಳ್ವಾಸ್ ಕಾಲೇಜು ಮಹಿಳಾ ತಂಡಕ್ಕೆ ಜಯ
ಮಂಗಳೂರು ವಿವಿ ಕ್ರಿಕೆಟ್ ಪಂದ್ಯಾವಳಿ: ಆಳ್ವಾಸ್ ಕಾಲೇಜು ಮಹಿಳಾ ತಂಡಕ್ಕೆ ಜಯ