ಮೂಡುಬಿದಿರೆ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಗೆ ಸುಮಾರು 70 ಸಾವಿರ ರೂಪಾಯಿ ವೆಚ್ಚದ ಮೈಕ್ ಸೆಟ್ಟನ್ನು ನೀಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹೆಗ್ಡೆ ಮುಖ್ಯ ಶಿಕ್ಷಕಿ ಸಾವಿತ್ರಿ ಅವರಿಗೆ ಕೊಡುಗೆಯನ್ನು ಹಸ್ತಾಂತರಿಸಿದರು. ಶಾಲಾ ಸಂಚಾಲಕ ಎಸ್.ಡಿ.ಸಂಪತ್ ಸಾಮ್ರಾಜ್ಯ, ರೋಟರಿ ಕ್ಲಬ್ ಕಾರ್ಯದರ್ಶಿ ಪವನ್ ರಾಜ್, ಸಹಾಯಕ ಗವರ್ನರ್ ಉಮೇಶ್ ರಾವ್, ಆಡಳಿತ ಮಂಡಳಿಯ ಕಾರ್ಯದರ್ಶಿ ಟಿ.ಕೆ.ವೆಂಕಟರಾವ್, ಕೋಶಾಧಿಕಾರಿ ಡಾ. ಆಶೀರ್ವಾದ್, ಸದಸ್ಯರಾದ ಕೆ.ಎನ್.ಭಟ್, ಜಯಾನಂದ ಶೆಟ್ಟಿ, ಸುರೇಶ್ ಅಂಚನ್, ಶಿಕ್ಷಕಿಯರಾದ ಮಾಲತಿ, ಶ್ವೇತಾ, ಸುಮಂಗಳಾ ಹಾಗೂ ಸಿಬ್ಬಂದಿಗಳಾದ ವಿನಾಯಕ ಕಾಮತ್, ಮುಹಮ್ಮದ್ ಉಪಸ್ಥಿತರಿದ್ದರು.
ಶಿರ್ತಾಡಿ ಪ್ರೌಢಶಾಲೆಗೆ ಮೂಡುಬಿದಿರೆ ರೋಟರಿ ಕ್ಲಬ್ನಿಂದ ಮೈಕ್ ಸೆಟ್ ಕೊಡುಗೆ
ಶಿರ್ತಾಡಿ ಪ್ರೌಢಶಾಲೆಗೆ ಮೂಡುಬಿದಿರೆ ರೋಟರಿ ಕ್ಲಬ್ನಿಂದ ಮೈಕ್ ಸೆಟ್ ಕೊಡುಗೆ