ಮೂಡುಬಿದಿರೆ: ಅತ್ಯುತ್ತಮ ಕ್ಷೌರಿಕ ಮತ್ತು ಸೌಂದರ್ಯ ವರ್ಧನೆ ಸೇವೆಗಳಿಗೆ ಹೆಸರಾಗಿರುವ ಎಸ್.ಕೆ. ಸಲೂನ್ ಸಂಸ್ಥೆಯ ಹೊಸ ಶಾಖೆಯು ಮಾಸ್ತಿಕಟ್ಟೆ ರಸ್ತೆಯ ವಿಶ್ವಾಸ್ ಅಪಾರ್ಟ್‌ಮೆಂಟ್‌ನ ಪ್ಯಾರಡೈಸ್ ಗ್ಯಾಲಕ್ಸಿ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು.
ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅತ್ಯಾಧುನಿಕ ಶೈಲಿಯ ಹೇರ್ ಕಟ್, ಶೇವಿಂಗ್, ಬಿಯರ್ಡ್ ಡಿಸೈನ್, ಫೇಶಿಯಲ್, ಹೇರ್ ಸ್ಪಾ, ಕ್ಯಾರಟಿನ್ ಟ್ರೀಟ್ಮೆಂಟ್ ಹಾಗೂ ಹೇರ್ ರೀಬಾಂಡಿಂಗ್ (ರಿಮೋರ್ಣಿಂಗ್) ಸೇರಿದಂತೆ ಹತ್ತಾರು ಸುಧಾರಿತ ಸೇವೆಗಳನ್ನು ಈ ಹೊಸ ಶಾಖೆಯಲ್ಲಿ ಪರಿಚಯಿಸಲಾಗಿದೆ. ಗುಣಮಟ್ಟದ ಸೌಂದರ್ಯ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಆರಂಭವಾಗಿರುವ ಈ ಸಂಸ್ಥೆಯ ಸೇವೆಗಳಿಗಾಗಿ ಗ್ರಾಹಕರು ಮೊಬೈಲ್ ಸಂಖ್ಯೆ 7088616814 ಮೂಲಕ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.