ಮೂಡುಬಿದಿರೆ: ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಮಹಾ ಪೋಷಕ - ಶಿಕ್ಷಕರ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ನೀರಿನ ಬಾಟಲಿ ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು. ಶಾಲೆಯ 1ನೇ ತರಗತಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ ಆದಾಯ ಇಲಾಖೆ ಅಧಿಕಾರಿ ವರುಣ್ ಮಾತನಾಡಿ, ಹಿಂದೆ ಶಾಲೆಗಳಲ್ಲಿ ಇಂದಿನಷ್ಟು ಸೌಲಭ್ಯಗಳು ಇರಲಿಲ್ಲ. ಇಂದು ಸರ್ಕಾರ ಮತ್ತು ದಾನಿಗಳ ನೆರವಿನಿಂದ ಹಲವು ಸವಲತ್ತುಗಳು ನಮ್ಮ ಮಕ್ಕಳಿಗೆ ಸಿಗುತ್ತಿವೆ. ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಸಂಸ್ಥೆಯ 7ನೇ ವರ್ಷದ ಸೇವಾ ಯೋಜನೆ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿ ಗಿರೀಶ್ ಶೆಟ್ಟಿ ಜೋರ್ಡನ್ ಕಟೀಲ್ ಹಾಗೂ ಕಟೀಲು ಅಜಾರು ಗುತ್ತು ವಿಜಯ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಒದಗಿಸಿದ ನೀರಿನ ಸ್ಟೀಲ್ ಬಾಟಲಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದಾನಿಗಳನ್ನು ಗೌರವಿಸಲಾಯಿತು. ಪುರಸಭಾ ಮಾಜಿ ಸದಸ್ಯೆ ದಿವ್ಯಾ ಜಗದೀಶ್, ನೇತಾಜಿ ಬ್ರಿಗೇಡ್ ಸಂಚಾಲಕರು ರಾಹುಲ್ ಕುಲಾಲ್ , ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ನಂದ ಭಟ್, ಸಹ ಸಂಚಾಲಕ ಎಸ್.ಕುಮಾರ್ ಮಾಸ್ತಿಕಟ್ಟೆ, ಅಭಿಷೇಕ್ ಸಾಲ್ಯಾನ್, ಪೂರ್ಣಚಂದ್ರ , ಗ್ಯಾರೇಜ್ ಮಾಲಕರ ಸಂಘ ಮೂಡುಬಿದಿರೆ ಘಟಕದ ಕಾರ್ಯದರ್ಶಿ ಪ್ರಕಾಶ್ ಅಮೀನ್, ಕಟೀಲು ಅಜಾರು ಗುತ್ತು ವಿಜಯ್ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ, ಮುಖ್ಯಶಿಕ್ಷಕಿ ಕಸ್ತೂರಿ ಎಚ್. ಹಾಗೂ ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನಷ್ಟು ಓದಿ
ಪವರ್ ಫ್ರೆಂಡ್ಸ್ ಕುಟುಂಬ ಸಮ್ಮಿಲನ: ಆಮಂತ್ರಣ ಪತ್ರಿಕೆ ಬಿಡುಗಡೆ- ಸಾಧಕರಿಗೆ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಪವರ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ‘ಪವರ್ ಫ್ರೆಂಡ್ಸ್ ಪ್ರಶಸ್ತಿ’ ಪ್ರದಾನ ಸಮಾರಂಭವು ಪ್ರೀತಮ್ ಸಭಾಭವನದಲ್ಲಿ ನಡೆಯಿತು.
ಮೂಡುಬಿದಿರೆಯಲ್ಲಿ ಆ. 22ರಂದು 23ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್
ಮೂಡುಬಿದಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನ ಸಮಾರೋಪ ಸಮಾರಂಭ ಆಗಸ್ಟ್ 22ರಂದು ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ
ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.