ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೂಡುಬಿದಿರೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪುರಸಭಾ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜ್ಯೋತಿನಗರದ ಇಕೋ ಕ್ಲಬ್ ನೇತೃತ್ವದಲ್ಲಿ "ಏಕ್ ಪೇಡ್ ಮಾ ಕೆ ನಾಮ್" ಅಭಿಯಾನದಡಿ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಜ್ಯೋತಿನಗರ ಶಾಲಾ ಮುಖ್ಯ ಶಿಕ್ಷಕಿ ಅಪೋಲಿನ್ ಮೋನಿಸ್, ಉಪವಲಯಾರಣ್ಯಾಧಿಕಾರಿ ಗುರುಮೂರ್ತಿ, ಗಸ್ತು ಅರಣ್ಯ ಪಾಲಕರುಗಳಾದ ಶಂಕರ್ ಗೌಡ, ಭರತೇಶ್ ಸುವರ್ಣ, ಸ್ಮಿತಾ ಮತ್ತು ಅರಣ್ಯ ವೀಕ್ಷಕ ನಾರಾಯಣ ಹಾಗೂ ಶಿಕ್ಷಕ ಉಪಸ್ಥಿತರಿದ್ದರು.
ಮೂಡುಬಿದಿರೆ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲ ಸಂಗನ ಬಸಯ್ಯ ಹೀರೇಮಠ್ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲೂ ಉಪವಲಯಾರಣ್ಯಾಧಿಕಾರಿ ಗುರುಮೂರ್ತಿ, ಗಸ್ತು ಅರಣ್ಯ ಪಾಲಕರುಗಳಾದ ಶಂಕರ್ ಗೌಡ, ಭರತೇಶ್ ಸುವರ್ಣ, ಸ್ಮಿತಾ ಮತ್ತು ಅರಣ್ಯ ವೀಕ್ಷಕ ನಾರಾಯಣ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಮತ್ತು ತಾಯಿಯ ನೆನಪಿನಲ್ಲಿ ಗಿಡ ನೆಡುವ ಈ "ಏಕ್ ಪೇಡ್ ಮಾ ಕೆ ನಾಮ್" ಅಭಿಯಾನವು ವಿದ್ಯಾರ್ಥಿಗಳಲ್ಲಿ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಯಿತು.
ತಾಯಿಯ ನೆನಪಿನಲ್ಲಿ ಗಿಡ ನೆಡುವ ಅಭಿಯಾನ: ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ, ಜ್ಯೋತಿನಗರ ಶಾಲೆಗಳಲ್ಲಿ ಪರಿಸರ ದಿನ
ತಾಯಿಯ ನೆನಪಿನಲ್ಲಿ ಗಿಡ ನೆಡುವ ಅಭಿಯಾನ: ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ, ಜ್ಯೋತಿನಗರ ಶಾಲೆಗಳಲ್ಲಿ ಪರಿಸರ ದಿನ