ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆಯ ಕಾಯರ್ಗುಂಡಿ ಎಂಬ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದು ಗಲೀಜು ಮಾಡಿದ ಮಹಿಳೆಯನ್ನು ಪತ್ತೆಹಚ್ಚಿದ ಪಿಡಿಒ, ಕಸ ಎಸೆದವರಿಂದಲೇ ಅದನ್ನು ವಿಲೇವಾರಿ ಮಾಡಿಸಿ, 2 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮಹಿಳೆಯೊಬ್ಬರು ಶನಿವಾರ ಬೆಳಿಗ್ಗೆ ತಮ್ಮ ಮನೆಯ ಕಸವನ್ನು ಸಂಪಿಗೆ ಸಾರ್ವಜನಿಕ ಸ್ಥಳದಲ್ಲಿ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಪಿಡಿಒ ಭೀಮಾ ನಾಯಕ್ ಅವರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ಭೀಮಾ ನಾಯಕ್, ಕಸ ಎಸೆದ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಸಾರ್ವಜನಿಕ ಸ್ಥಳವನ್ನು ಗಲೀಜು ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿ, ಅವರಿಂದಲೇ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಕಾರಣಕ್ಕೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನಷ್ಟು ಓದಿ
ಶಿರ್ತಾಡಿಯಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ
ಮೂಡುಬಿದಿರೆ: ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಮತ್ತು ನಾರಾಯಣ ಗುರು ಮಹಿಳಾ ಘಟಕದ ಆಶ್ರಯದಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆಯು ಆ.21ರಂದು ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.
ಕೊಡ್ಯಡ್ಕ ಮಿತ್ತಬೈಲ್ ಬಳಿ ಪಿಕ್ಅಪ್ ವಾಹನ ಪಲ್ಟಿ
ಮೂಡುಬಿದಿರೆ: ಕೊಡ್ಯಡ್ಕ ಮಿತ್ತಬೈಲ್ ಬಳಿ ಜನರೇಟರ್ ಸಾಗಿಸುತ್ತಿದ್ದ ಪಿಕ್ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಾರ್ಗಮಧ್ಯದಲ್ಲೇ ಪಲ್ಟಿಯಾದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು. ಪಾಲಡ್ಕ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಪಿಕ್ಅಪ್ ವಾಹನವು ಕೊಡ್ಯಡ್ಕ ಮಿತ್ತಬೈಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರ್ಗಮಧ್ಯದಲ್ಲೇ ಪಲ್ಟಿಯಾಗಿ ಬಿದ್ದಿದೆ. ವಾಹನದಲ್ಲಿ ಜನರೇಟರ್ ಸಾಗಿಸಲಾಗುತ್ತಿತ್ತು.
ಪವರ್ ಫ್ರೆಂಡ್ಸ್ ಕುಟುಂಬ ಸಮ್ಮಿಲನ: ಆಮಂತ್ರಣ ಪತ್ರಿಕೆ ಬಿಡುಗಡೆ- ಸಾಧಕರಿಗೆ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಪವರ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ‘ಪವರ್ ಫ್ರೆಂಡ್ಸ್ ಪ್ರಶಸ್ತಿ’ ಪ್ರದಾನ ಸಮಾರಂಭವು ಪ್ರೀತಮ್ ಸಭಾಭವನದಲ್ಲಿ ನಡೆಯಿತು.