ಮೂಡುಬಿದಿರೆ: ಕಾರ್ಕಳದ ಕ್ರಿಯೇಟಿವ್ ಕಾಲೇಜು ಕೆಸಿಇಟಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಫಲಿತಾಂಶ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಹಾಗೂ ನರ್ಸಿಂಗ್ ಸೇರಿದಂತೆ ಹಲವು ಪ್ರಮುಖ ವೃತ್ತಿಪರ ಕೋರ್ಸ್‌ಗಳ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಗೈದಿದ್ದಾರೆ. ಕಾಲೇಜಿನ ಒಟ್ಟು 30 ವಿದ್ಯಾರ್ಥಿಗಳು 100ರ ಒಳಗಿನ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ನಾಗದೇವ್ ಎಂ. ಜಿ 28ನೇ ರ‍್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಉಳಿದಂತೆ ಸಂವಿತ್ ಅಮಿತ್ 55, ಧೃತಿ ವಿ ಬಿ 71, ತೇಜಸ್ ಆರ್ ಬಿ 82, ನಮಿತ್ ಕೆ ಹೆಗಡೆ 199, ತೇಜಸ್ ಹೆಗಡೆ ಎಚ್ ಡಿ 236, ಸುಕ್ಷೇತ್ ಗಿರೇಶ್ ಗೌಡ 238, ನಿನಾದ್ ರಾಜೇಶ್ ನಾಯ್ಕ್ 395, ಪ್ರಣಮ್ಯ ಭಟ್ 490, ಲೇಖನ್ ಕಾರ್ಯಪ್ಪ 493 ಹಾಗೂ ಧನುಷ್ ಹರೀಶ್ ಎ 496 ರ‍್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 22 ವಿದ್ಯಾರ್ಥಿಗಳು 1000 ರ‍್ಯಾಂಕ್ ಒಳಗಡೆ ಮತ್ತು 43 ವಿದ್ಯಾರ್ಥಿಗಳು 2000 ರ‍್ಯಾಂಕ್ ಒಳಗಡೆ ಸ್ಥಾನ ಪಡೆದಿದ್ದಾರೆ.

ಕೃಷಿ ವಿಭಾಗದಲ್ಲಿ ಧೃತಿ ವಿ ಬಿ 11, ತೇಜಸ್ ಆರ್ ಬಿ 17, ತೇಜಸ್ ಹೆಗಡೆ ಎಚ್ ಡಿ 53, ಲೇಖನ್ ಕಾರ್ಯಪ್ಪ 69, ಪ್ರಣಮ್ಯ ಭಟ್ 90, ಮೋಕ್ಷ ವಿ ಎಮ್ 108, ಶ್ರವ್ಯ ಬಾಲಕೃಷ್ಣ 148, ಬಗನಾಲ್ ಆಶ್ರಿತ್ ನಂದನ್ 205, ನಟರಾಜ್ 261, ಆಯಿ ವಿ 269, ಕೆ ಎನ್ ರಾಘವೇಂದ್ರ 303, ಸೃಜನಾ ಎಸ್ 345, ತರುಣ್ ಸಾಗರ್ 369, ಅನುಷಾ ಜನಾರ್ದನ್ 436 ಹಾಗೂ ಹಿತೈಷಿ 443 ರ‍್ಯಾಂಕ್ ಪಡೆದಿದ್ದಾರೆ.

ಪಶುವೈದ್ಯಕೀಯ ವಿಭಾಗದಲ್ಲಿ ತೇಜಸ್ ಆರ್ ಬಿ 102, ಧೃತಿ ವಿ ಬಿ 120, ಮೋಕ್ಷ ವಿ ಎಮ್ 197, ವಿ ಆರ್ ಗಣೇಶ್ 230, ಲೇಖನ್ ಕಾರ್ಯಪ್ಪ 248 ಮತ್ತು ರಂಜಿತ್ ಎಂ ಶೆಟ್ಟಿ 441 ರ‍್ಯಾಂಕ್ ಗಳಿಸಿದ್ದಾರೆ. ನರ್ಸಿಂಗ್ ವಿಭಾಗದಲ್ಲೂ ಇದೇ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಿದ್ದು, ತೇಜಸ್ ಆರ್ ಬಿ 102, ಧೃತಿ ವಿ ಬಿ 121, ಮೋಕ್ಷ ವಿ ಎಮ್ 198, ವಿ ಆರ್ ಗಣೇಶ್ 231, ಲೇಖನ್ ಕಾರ್ಯಪ್ಪ 249 ಹಾಗೂ ರಂಜಿತ್ ಎಂ ಶೆಟ್ಟಿ 442 ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 30 ವಿದ್ಯಾರ್ಥಿಗಳು 100ರ ಒಳಗಿನ ರ‍್ಯಾಂಕ್, 290 ವಿದ್ಯಾರ್ಥಿಗಳು 1000ರ ಒಳಗಿನ ರ‍್ಯಾಂಕ್ ಹಾಗೂ 521 ವಿದ್ಯಾರ್ಥಿಗಳು 2000ರ ಒಳಗಿನ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.