ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್, ಅಬ್ಬಕ್ಕ ಬ್ರಿಗೇಡ್ ಹಾಗೂ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಜವನೆರ್ ಬೆದ್ರ ಫೌಂಡೇಶನ್‌ನ ಎಕ್ಸಿಕ್ಯೂಟಿವ್ ಕಮಿಟಿ ಸಭೆ, ನೂತನ ಟ್ರಸ್ಟಿಗಳು ಹಾಗೂ ಸಂಯೋಜಕರ ಪದಗ್ರಹಣ ನೆರವೇರಿತು. ಜವನೆರ್ ಬೆದ್ರ ಫೌಂಡೇಶನ್ ಮಹಿಳಾ ಘಟಕವಾದ ಅಬ್ಬಕ್ಕ ಬ್ರಿಗೇಡ್‌ನ ನೂತನ ಪದಾಧಿಕಾರಿಗಳ ಪದಗ್ರಹಣವೂ ನಡೆಯಿತು. ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳು, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಂಘಟನಾ ಬಲವರ್ಧನೆ ಕುರಿತು ಚರ್ಚೆ ನಡೆಸಲಾಯಿತು.

ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಮಾರ್ಗದರ್ಶಕ ರಾಜೇಂದ್ರ ಜಿ, ಉಪಾಧ್ಯಕ್ಷ ರಾಜೇಶ್ ಕೋಟೆಗಾರ್, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಅಬ್ಬಕ್ಕ ಬ್ರಿಗೇಡ್‌ನ ನಿಕಟಪೂರ್ವ ಸಂಚಾಲಕಿ ಸಹನ ನಾಯಕ್ ಹಾಗೂ ನೂತನ ಸಂಚಾಲಕಿ ಸುನಿತಾ ಉದಯ್ ಉಪಸ್ಥಿತರಿದ್ದರು.

ಸಂದೀಪ್ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.