ಮೂಡುಬಿದಿರೆ: ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನ ಅಗತ್ಯಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅತ್ಯಾಧುನಿಕ ರೋಬೋಟಿಕ್, ಎಐ ಹಾಗೂ ಕ್ರೀಡೋ ಲ್ಯಾಬ್‌ಗಳನ್ನು ಉದ್ಘಾಟಿಸಲಾಯಿತು.
ದಿಗಂಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ. ವೀರೇಂದ್ರ ಲ್ಯಾಬ್‌ಗಳನ್ನು ಉದ್ಘಾಟಿಸಿ, ನವೀನತೆ, ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಾಯೋಗಿಕ ಕಲಿಕೆಗೆ ಈ ಸೌಲಭ್ಯಗಳು ಪೂರಕವಾಗಲಿವೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಮತ್ತು ತಾಂತ್ರಿಕ ಕೌಶಲ್ಯ ವೃದ್ಧಿಗೆ ರೋಬೋಟಿಕ್ ಹಾಗೂ ಎಐ ಲ್ಯಾಬ್ ನೆರವಾಗಲಿದ್ದು, ಕ್ರೀಡೋ ಲ್ಯಾಬ್ ಚಟುವಟಿಕೆ ಆಧಾರಿತ ಕಲಿಕೆಗೆ ಉತ್ತೇಜನ ನೀಡಲಿದೆ ಎಂದರು.
ಸಂಸ್ಥೆಯ ಸಂಚಾಲಕ ಕೆ. ಹೇಮರಾಜ್, ಖಜಾಂಚಿ ರೋಹಿತ್ ಕುಮಾರ್, ಮುಖ್ಯ ಶಿಕ್ಷಕಿ ವೀಣಾ ಪ್ರಮೋದ್, ಶಿಕ್ಷಕರು ಉಪಸ್ಥಿತರಿದ್ದರು.