ಮೂಡುಬಿದಿರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಯುವಜನತೆ ಶಿಕ್ಷಣ, ಕ್ರೀಡೆ ಹಾಗೂ ರಾಷ್ಟ್ರಸೇವೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಮೂಲ್ಕಿ–ಮೂಡುಬಿದಿರೆ ಮಂಡಲದ ವಿಶೇಷ ಜನಸಂಪರ್ಕ ಅಭಿಯಾನದ ಅಂಗವಾಗಿ ಆಲಂಗಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್‌ನ ದಿಶಾ ಪೂಜಾರಿ ಹಾಗೂ ಅಗ್ನಿವೀರ್‌ಗೆ ಆಯ್ಕೆಯಾದ ಪಣಪಿಲ ಗ್ರಾಮದ ವಿರಾಜ್ ಪೂಜಾರಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಾಧಕರ ಯಶಸ್ಸಿನ ಹಿಂದೆ ಕುಟುಂಬದವರು ಹಾಗೂ ಶಿಕ್ಷಕರ ಪರಿಶ್ರಮ ಅಡಗಿದ್ದು, ಯುವಕರು ತಮ್ಮ ಗುರಿಯತ್ತ ನಿರಂತರ ಪ್ರಯತ್ನಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಮೂಲ್ಕಿ–ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ ಹಾಗೂ ಹರಿಪ್ರಸಾದ್, ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲ್, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಯುವ ಮೋರ್ಚಾದ ಕಾರ್ಯದರ್ಶಿ ಭರತ್ ಶೆಟ್ಟಿ, ಕೆ.ಆರ್. ಪಂಡಿತ್, ಎಂ.ಎಸ್. ಕೋಟ್ಯಾನ್, ಕೆ. ಕೃಷ್ಣರಾಜ ಹೆಗ್ಡೆ, ಈಶ್ವರ್ ಕಟೀಲ್, ಮೇಘನಾಥ ಶೆಟ್ಟಿ, ಸುಕೇಶ್ ಶೆಟ್ಟಿ ಎದಮಾರು, ಅಶ್ವತ್ಥ್ ಪಣಪಿಲ, ದೀಕ್ಷಿತ್ ಪಣಪಿಲ, ಸಚಿನ್ ಪಣಪಿಲ ಹಾಗೂ ಜೋಯ್ಲಸ್ ಡಿ'ಸೋಜ ತಾಕೊಡೆ ಉಪಸ್ಥಿತರಿದ್ದರು.