*## ಮೂಡುಬಿದಿರೆ: ಮೂಡುಬಿದಿರೆ ಕಡೆಯಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯ ಸಮಗಾರಗುಂಡಿ ಸೇತುವೆ ಸಮೀಪದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದು, ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ತೀವ್ರ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ.
ಮೂಡುಬಿದಿರೆ: ಮೂಡುಬಿದಿರೆ ಕಡೆಯಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯ ಸಮಗಾರಗುಂಡಿ ಸೇತುವೆ ಸಮೀಪದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದು, ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ತೀವ್ರ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ.
ಹೆದ್ದಾರಿಯ ತಿರುವಿನಂತಿರುವ ರಸ್ತೆ ಬದಿಯಲ್ಲಿ ಲಾರಿ ಕೆಟ್ಟು ನಿಂತಿದ್ದರೂ ಚಾಲಕ ರಾಗಲಿ ಅಥವಾ ಸಂಬಂಧಪಟ್ಟವರಾಗಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ವಾಹನದ ಮುಂಭಾಗದಲ್ಲಾಗಲಿ ಅಥವಾ ಹಿಂಭಾಗದಲ್ಲಾಗಲಿ ಯಾವುದೇ ರಿಫ್ಲೆಕ್ಟರ್‌ಗಳನ್ನು ಅಳವಡಿಸದೆ ಇರುವುದು ಸವಾರರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ತೀವ್ರ ಹೆಡ್‌ಲೈಟ್ ಬೆಳಕಿನಿಂದಾಗಿ ರಸ್ತೆ ಬದಿಯಲ್ಲಿ ನಿಂತಿರುವ ಲಾರಿ ತಕ್ಷಣಕ್ಕೆ ಗೋಚರಿಸುತ್ತಿಲ್ಲ.
ಅತಿ ವೇಗದ ಚಾಲನೆಗೆ ಕಾದಿದೆ ಗಂಡಾಂತರ: ಈ ಮಾರ್ಗವಾಗಿ ವಾಹನಗಳು ಅತಿ ವೇಗವಾಗಿ ಬಂದರೆ, ಕೊನೆ ಕ್ಷಣದಲ್ಲಿ ಲಾರಿ ಇರುವುದು ತಿಳಿಯದೆ ನೇರವಾಗಿ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಾಗಿದೆ. ಕತ್ತಲೆಯಲ್ಲಿ ನಿಂತಿರುವ ಈ ಲಾರಿಯು ಯಾವುದೇ ಮುನ್ನೆಚ್ಚರಿಕೆ ದೀಪಗಳಿಲ್ಲದೆ ಇರುವುದರಿಂದ ಭೀಕರ ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ತಡರಾತ್ರಿ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ಈ ಜಾಗದಲ್ಲಿ ವಾಹನದ ವೇಗವನ್ನು ನಿಯಂತ್ರಿಸಿ, ಅತ್ಯಂತ ಜಾಗರೂಕರಾಗಿ ಚಲಿಸಬೇಕಾಗಿ ವಿನಂತಿಸಲಾಗಿದೆ.