ಮೂಡುಬಿದಿರೆ: ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗ್ರೂಪ್-1 ಹಾಗೂ ಗ್ರೂಪ್-2 ವಿಭಾಗಗಳಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
ಗ್ರೂಪ್-1 ಹಾಗೂ ಗ್ರೂಪ್-2 ವಿಭಾಗಗಳಲ್ಲಿ ಗೋಡ್ವಿಲ್ ವಿನ್ಸ್ಟನ್ ವಾಸ್ 355 ಅಂಕ, ರಾಹುಲ್ ಉಮೇಶ್ 313 ಅಂಕ, ಎನ್. ಚಿರಂತನಾ 312 ಅಂಕ ಹಾಗೂ ರೋಹಿತ್ ಪೂಜಾರಿ 304 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯೇಟ್ ಗ್ರೂಪ್-1 ವಿಭಾಗದಲ್ಲಿ ಪ್ರಸ್ಮಿಯಾ 162 ಅಂಕ, ಪನ್ನಗ ಜೈನ್ 157 ಅಂಕ, ವಿಜಯ್ ಕುಮಾರ್ 164 ಅಂಕ, ಸಾನಿಯಾ 150 ಅಂಕ, ಪ್ರಸಿದ್ಧ್ ಪೂಜಾರಿ 150 ಅಂಕ, ಮೋನಿಶಾ ಕುಂದರ್ 163 ಅಂಕ ಹಾಗೂ ಶ್ರೇಯಾ ಸುರೇಂದ್ರ ಪೂಜಾರಿ 150 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯೇಟ್ ಗ್ರೂಪ್-2 ವಿಭಾಗದಲ್ಲಿ ಗಿರೀಶ್ 179 ಅಂಕ ಹಾಗೂ ತರುಣ್ ಕುಮಾರ್ 152 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದರು.