ಮೂಡುಬಿದಿರೆ:ಲಯನ್ಸ್ ಕ್ಲಬ್ ಅಲಂಗಾರಿನ 2026–27ನೇ ಸಾಲಿನ ಪದಗ್ರಹಣ ಸಮಾರಂಭ ಜೂನ್ 21ರಂದು ಕಡಲಕೆರೆಯ ಸೃಷ್ಟಿ ಹಾಲ್‌ನಲ್ಲಿ ನಡೆಯಿತು. ಜಿಲ್ಲಾ 317Dಯ ದ್ವಿತೀಯ ಉಪ ಜಿಲ್ಲಾ ಗವರ್ನರ್ ವೆಂಕಟೇಶ್ ಹೆಬ್ಬಾರ್ ಪದಗ್ರಹಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಮಂಡಳಿಗೆ ಪದಪ್ರದಾನ ಮಾಡಿದರು.
ವೆಂಕಟೇಶ್ ಹೆಬ್ಬಾರ್ ದಂಪತಿ, 2026–27ನೇ ಸಾಲಿನ ಅಧ್ಯಕ್ಷ ರೋಕಿ ಮಸ್ಕರೇನ್ಹಾಸ್ ಮತ್ತು ಲೂಸಿ ಮಸ್ಕರೇನ್ಹಾಸ್, ಕಾರ್ಯದರ್ಶಿ ಹಾಗೂ ವಲಯ ಪ್ರತಿನಿಧಿ ಜೆಸಿಂತ ಡಿಮೆಲ್ಲೊ, ಖಜಾಂಚಿ ಆಲ್ವಿನ್ ಡಿಕುನ್ಹಾ, ನಿರ್ಗಮಿತ ಅಧ್ಯಕ್ಷ ಅಮಿತ್ ಡಿಸಿಲ್ವ, ನಿರ್ಗಮಿತ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಪ್ರಾಂತೀಯ ಅಧ್ಯಕ್ಷ ಎಂ. ಕೆ. ದಿನೇಶ್, ಸ್ಥಾಪಕ ಅಧ್ಯಕ್ಷ ಫಾ. ಬಾಸಿಲ್ ವಾಸ್, ವಲಯ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ ಹಿಬರೋಡಿ, ಶಿವಪ್ರಸಾದ್ ಬಿ. ಹಾಗೂ ವಲಯ VIIIರ ಕ್ಲಬ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
2025–26ನೇ ಸಾಲಿನಲ್ಲಿ ಲಯನ್ಸ್ ಕ್ಲಬ್ ಅಲಂಗಾರ್ ಕೈಗೊಂಡ ವಿವಿಧ ಸೇವಾ ಚಟುವಟಿಕೆಗಳನ್ನು ವೆಂಕಟೇಶ್ ಹೆಬ್ಬಾರ್ ಶ್ಲಾಘಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಆಲ್ವಿನ್ ರೊಡ್ರಿಗಸ್ ಅವರನ್ನು ಕ್ಲಬ್‌ನ 51ನೇ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.
ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕೀಬೋರ್ಡ್ ತರಬೇತಿ ನೀಡುತ್ತಿರುವ ಸಿಸ್ಟರ್ ಸೆಲೆಸ್ತಿನ್ ಅವರನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹಾಗೂ ಆಳ್ವಾಸ್ ಆಸ್ಪತ್ರೆಯಲ್ಲಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ರೋಗಿಗಳಿಗೆ ನೆರವಾಗುತ್ತಿರುವ ವಾರ್ಡ್ ಬಾಯ್ ರಮೇಶ್ ಬಿ. ಅವರನ್ನು ನಿಸ್ವಾರ್ಥ ಸೇವೆಗಾಗಿ ಗೌರವಿಸಲಾಯಿತು.
ನಿರ್ಗಮಿತ ಅಧ್ಯಕ್ಷ ಅಮಿತ್ ಡಿಸಿಲ್ವ ತಮ್ಮ ಅಧಿಕಾರಾವಧಿಯಲ್ಲಿ ಕ್ಲಬ್ ಸದಸ್ಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ನೂತನ ಪದಾಧಿಕಾರಿಗಳ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸ್ಥಾಪಕ ಅಧ್ಯಕ್ಷ ಫಾ. ಬಾಸಿಲ್ ವಾಸ್, ಪ್ರಾಂತೀಯ ಅಧ್ಯಕ್ಷ ಎಂ. ಕೆ. ದಿನೇಶ್ ಹಾಗೂ ವಲಯ ಅಧ್ಯಕ್ಷ ದೇವದಾಸ್ ಎಲ್. ಶೆಟ್ಟಿ ಹಿಬರೋಡಿ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು. ಅಮಿತ್ ಡಿಸಿಲ್ವ ಸ್ವಾಗತಿಸಿದರು. ಜೆಸಿಂತ ಡಿಮೆಲ್ಲೊ ವಂದಿಸಿದರು. ಮನೋಹರ್ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.