ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಇದರ 2026–27ನೇ ಸಾಲಿನ ಅಧ್ಯಕ್ಷರಾಗಿ ಶಿರ್ತಾಡಿಯ ಪ್ರಭಾ ಕ್ಲಿನಿಕ್‌ನ ಡಾ. ಆಶೀರ್ವಾದ್ ಎಂ.ಪಿ. ಹಾಗೂ ಕಾರ್ಯದರ್ಶಿಯಾಗಿ ಉದ್ಯಮಿ ಪ್ರಜ್ವಲ್ ಆಚಾರ್ ಆಯ್ಕೆಯಾಗಿದ್ದಾರೆ.
ಕ್ಲಬ್‌ನ ಉಪಾಧ್ಯಕ್ಷರಾಗಿ ಡಾ. ಅರವಿಂದ್ ಕಿಣಿ, ಕೋಶಾಧಿಕಾರಿಯಾಗಿ ಜಯಪ್ರಕಾಶ ವಿಲ್ಫ್ರೆಡ್ ಪಿಂಟೋ ಹಾಗೂ ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಜಾನ್ ಜೋಸೆಫ್ ಪಿಂಟೋ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ ಡಾ. ಪ್ರಸನ್ನ ಕಾಕುಂಜೆ (ಸಾರ್ಜೆಂಟ್ ಅಟ್ ಆರ್ಮ್ಸ್), ಅಬ್ದುಲ್ ಗಫೂರ್ (ವೊಕೇಶನಲ್ ಸರ್ವಿಸ್), ಡಾ. ಮುರಳಿಕೃಷ್ಣ ಆರ್.ವಿ. (ಕ್ಲಬ್ ಫೌಂಡೇಶನ್), ಡಾ. ರಮೇಶ್ (ಸರ್ವಿಸ್ ಪ್ರಾಜೆಕ್ಟ್), ಸಂತೋಷ್ ಕುಮಾರ್ (ಎಕ್ಸಿಕ್ಯೂಟಿವ್ ಸೆಕ್ರೆಟರಿ), ಮಹಮ್ಮದ್ ಆರಿಫ್ (ಸದಸ್ಯತ್ವ), ಅವಿಲ್ ಡಿಸೋಜಾ (ನ್ಯೂ ಜನರೇಷನ್), ಬಾಹುಬಲಿ ಪ್ರಸಾದ್ ಎಂ. (ಪಬ್ಲಿಕ್ ಇಮೇಜ್) ಹಾಗೂ ಯತಿಕುಮಾರ ಸ್ವಾಮಿ ಗೌಡ (ಪಲ್ಸ್ ಪೋಲಿಯೋ) ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 6ರಂದು ಮೂಡುಬಿದಿರೆಯ ನಿಶ್ಮಿತಾ ಟವರ್ಸ್‌ನ ಪ್ಯಾರಡೈಸ್ ಮಲ್ಟಿ ಪರ್ಪಸ್ ಹಾಲ್‌ನಲ್ಲಿ ನಡೆಯಲಿದೆ.