ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ 2025–2026ನೇ ಸಾಲಿನಲ್ಲಿ ಸಮಾಜಮುಖಿ ಸೇವಾ ಕ್ಷೇತ್ರದಲ್ಲಿ 200 ಯೋಜನೆಗಳನ್ನು ಅನುಷ್ಠಾನಗೊಳಿಸಿ, 55 ಇನ್ನರ್ ವೀಲ್ ಕ್ಲಬ್‌ಗಳ ಪೈಕಿ ಅತ್ಯಧಿಕ ಯೋಜನೆಗಳನ್ನು ಕೈಗೊಂಡ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಗಾಗಿ ಕ್ಲಬ್‌ಗೆ 'ಅತ್ಯಧಿಕ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕ್ಲಬ್‌ಗೆ ವಿಶೇಷ ಮಾನ್ಯತಾ ಪ್ರಶಸ್ತಿ' ವಿಶೇಷ ಗೌರವ ಲಭಿಸಿದೆ.
ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಅವರ ನಾಯಕತ್ವದಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳು, ಹಿರಿಯ ನಾಗರಿಕರ ಆರೈಕೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಸೇವಾ ಚಟುವಟಿಕೆಗಳಿಗೆ ಸಂದ ಮಾನ್ಯತೆಯಾಗಿ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಸಾಧನೆಯ ಹಿಂದೆ ಕಾರ್ಯದರ್ಶಿ ಅನಿತಾ ಪೃಥ್ವಿರಾಜ್ ಶೆಟ್ಟಿ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯೆಯರ ಶ್ರಮ, ಸಹಕಾರ ಮತ್ತು ಸಮರ್ಪಿತ ಸೇವೆ ಪ್ರಮುಖ ಕಾರಣವಾಗಿದೆ ಎಂದು ಶ್ವೇತ ಜೈನ್ ತಿಳಿಸಿದ್ದಾರೆ.