ಮೂಡುಬಿದಿರೆ: ನಿಡ್ಡೋಡಿಯ ಸಂತ ತೆರೇಸಾಮ್ಮನವರ ಚರ್ಚ್ ಆವರಣದಲ್ಲಿ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಕಥೊಲಿಕ್ ಸಭೆ ಮಂಗಳೂರು ಪ್ರದೇಶ ನಿಡ್ಡೋಡಿ ಘಟಕದ ನೇತೃತ್ವದಲ್ಲಿ ಪರಿಸರ ಆಯೋಗ ಹಾಗೂ ಐಸಿವೈಎಂ ನಿಡ್ಡೋಡಿ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಧರ್ಮಗುರು ಲಿಯೋ ವಿಲಿಯಂ ಲೋಬೊ ಉದ್ಘಾಟಿಸಿ, ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಪರಿಸರದ ಬಗ್ಗೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಅಗತ್ಯವನ್ನು ತಿಳಿಸಿದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಪ್ರಿಮಾ ಕೊರೆಯಾ, ಆಯೋಗಗಳ ಸಂಯೋಜಕ ಮ್ಯಾಕ್ಸಿಮ್ ಪಿಂಟೊ, ಐಸಿವೈಎಂ ಘಟಕದ ಅಧ್ಯಕ್ಷ ಅಲನ್ ಸೆರಾವೊ, ಪರಿಸರ ಆಯೋಗದ ಹಿಲ್ಡಾ ಡಿಸೋಜ, ಕಥೊಲಿಕ್ ಸಭೆ ನಿಡ್ಡೋಡಿ ಘಟಕದ ಅಧ್ಯಕ್ಷೆ ಸರಿತ ತಾವ್ರೊ, ಕಾರ್ಯದರ್ಶಿ ಜೀವನ್ ಕ್ರಾಸ್ತಾ ಹಾಗೂ ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಡಿಸೋಜಾ ಉಪಸ್ಥಿತರಿದ್ದರು.
ಜೀವನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸರಿತಾ ತಾವ್ರೊ ವಂದಿಸಿದರು.
ಬಳಿಕ ಕುದ್ರಿಪದವು ಜಂಕ್ಷನ್‌ನಿಂದ ನಿಡ್ಡೋಡಿ ಪೇಟೆಯವರೆಗೆ ರಸ್ತೆ ಬದಿಯಲ್ಲಿದ್ದ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸುವ ಶ್ರಮದಾನ ನಡೆಸಲಾಯಿತು. ಈ ಕಾರ್ಯಕ್ಕೆ ಕಲ್ಲಮಂಡ್ಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಕಾರ್ಯದರ್ಶಿ ಸಹಕಾರ ನೀಡಿದರು.