ಮೂಡುಬಿದಿರೆ: ವಾಲ್ಪಾಡಿ ನೂರುಲ್ ಹುದಾ ಮದರಸದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆಯು ಮಸೀದಿ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ. ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಸಭೆಯ ಆರಂಭದಲ್ಲಿ ಖತೀಬರಾದ ಹಮೀದ್ ದಾರಿಮಿ ದುವಾ ನೆರವೇರಿಸಿದರು. ಸದರ್ ಉಸ್ಮಾನ್ ಬಾಖವಿ ಸಭೆಯನ್ನು ನಡೆಸಿಕೊಟ್ಟರು.
ಸಭೆಯಲ್ಲಿ ಮದರಸ ವಿದ್ಯಾರ್ಥಿಗಳ ಹಾಜರಾತಿ, ಶಿಸ್ತು ಹಾಗೂ ವಿದ್ಯಾಭ್ಯಾಸದ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರು ಹಾಗೂ ರಕ್ಷಕರು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಶಿಕ್ಷಕ-ರಕ್ಷಕ ಸಂಘದ ಮುಸ್ತಫಾ ಹನೀಫಿ, ಜಲೀಲ್ ಸಖಾಫಿ, ಇಬ್ರಾಹಿಂ, ಮಸೀದಿ ಕಮಿಟಿ ಕಾರ್ಯದರ್ಶಿ ಝಕರಿಯಾ ಯೂಸುಫ್, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು ಹಾಗೂ ಇತರರು ಉಪಸ್ಥಿತರಿದ್ದರು.