ಮೂಡುಬಿದಿರೆ: ಅರಣ್ಯ ಇಲಾಖೆ, ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ಐಸಿವೈಎಂ) ಹಾಗೂ ಸಂತ ವಿಕ್ಟರ್ ಚರ್ಚ್ ನೆಲ್ಲಿಕಾರು ಇವರ ಸಂಯುಕ್ತ ಆಶ್ರಯದಲ್ಲಿ ಚರ್ಚ್ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು

ಧರ್ಮಗುರು ಪೀಟರ್ ಅರಾನ್ಹ ಮಾತನಾಡಿ, ದೇಶದ ಪರಿಸರ ಸಮತೋಲನ ಹಾಗೂ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

ಉಪ ವಲಯಾರಣ್ಯಾಧಿಕಾರಿ ಬಸವರಾಜ್ ಮಾತನಾಡಿ, ಅರಣ್ಯ ಸಂರಕ್ಷಣೆ, ಪರಿಸರ ಕಾಳಜಿ ಹಾಗೂ ಜೀವ ವೈವಿಧ್ಯದ ಉಳಿವಿನ ಮಹತ್ವದ ಕುರಿತು ಮಾಹಿತಿ ನೀಡಿದರು.

ಐಸಿವೈಎಂ ಅಧ್ಯಕ್ಷ ಪ್ರಕಾಶ್ ಎಡ್ವಿನ್ ಡಿ'ಸೋಜ, ಉಪಾಧ್ಯಕ್ಷ ಪ್ರಕಾಶ್ ಮೋರಸ್, ನೆಲ್ಲಿಕಾರು ಚರ್ಚ್ ಐಸಿವೈಎಂ ಅಧ್ಯಕ್ಷ ಜಾಕ್ಸನ್ ಡಿ'ಸೋಜ, ನೆಲ್ಲಿಕಾರು ಘಟಕದ ಮೆಲ್ವೀನ್ ಪಿರೇರಾ, ಮೂಡುಬಿದಿರೆ ಐಸಿವೈಎಂ ಅಧ್ಯಕ್ಷ ಕಿರಣ್ ಪಿರೇರಾ ಹಾಗೂ ಗಸ್ತು ಅರಣ್ಯ ಪಾಲಕ ಧರ್ಮರಾಜ ಉಪಸ್ಥಿತರಿದ್ದರು.