ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್‌ನ 2026-27ನೇ ಸಾಲಿನ ಅಧ್ಯಕ್ಷರಾಗಿ ಡೆನ್ನೀಸ್ ಪಿರೇರಾ ಹಾಗೂ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಆಯ್ಕೆಯಾಗಿದ್ದಾರೆ.
ಐಪಿಪಿಯಾಗಿ ಹರೀಶ್ ಎಂ. ಕೆ., ಉಪಾಧ್ಯಕ್ಷರಾಗಿ ಶಂಕರ್ ಎ. ಕೋಟ್ಯಾನ್, ಕೋಶಾಧಿಕಾರಿಯಾಗಿ ಪ್ರವೀಣ್ ಡಿಸೋಜ, ಸರ್ಜೆಂಟ್ ಆರ್ಮ್ಸ್ ಆಗಿ ಅವಿಲ್ ಫೆರ್ನಾಂಡಿಸ್, ಒಕ್ಕೇಷನಲ್ ಸರ್ವೀಸ್ ನಿರ್ದೇಶಕರಾಗಿ ಸಿ. ಎ. ಉಮೇಶ್ ರಾವ್, ಅಂತರರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ರೋನಿ ಫೆರ್ನಾಂಡಿಸ್, ಯುವ ಸೇವಾ ನಿರ್ದೇಶಕರಾಗಿ ಭರತ್ ಶೆಟ್ಟಿ, ಮೆಂಬರ್‌ಶಿಪ್ ಚೇರ್ಮನ್ ಆಗಿ ಡಾ. ಮಹಾವೀರ ಜೈನ್, ಟಿಆರ್‌ಎಫ್ ಚೇರ್ಮನ್ ಆಗಿ ಬಲರಾಮ್ ಕೆ. ಎಸ್. ಹಾಗೂ ಕ್ಲಬ್ ಅಡ್ವೈಸರ್ ಆಗಿ ಪೂರ್ಣಚಂದ್ರ ಜೈನ್ ಆಯ್ಕೆಯಾಗಿದ್ದಾರೆ.