ಮೂಡುಬಿದಿರೆ: ರೋಟರಿ ಶಿಕ್ಷಣ ಸಂಸ್ಥೆಗಳ 2026-27ನೇ ಸಾಲಿನ ಆಡಳಿತ ಮಂಡಳಿ, ಶಿಕ್ಷಕರ ಹಾಗೂ ಪೋಷಕರ ಮಹಾಸಭೆ ಶನಿವಾರ ಅಮರಾವತಿ ಸಭಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ.ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮೂಡುಬಿದಿರೆ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ಗರ್ಭಕೋಶದ ಕ್ಯಾನ್ಸರ್ ಹಾಗೂ ಅದರ ಲಸಿಕೆ ಕುರಿತು ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೀರೂಪಾಕ್ಷಪ್ಪ ಮುಖ್ಯ ಅತಿಥಿಯಾಗಿದ್ದರು.

ಸಂಚಾಲಕ ಪ್ರವೀಣ್‌ಚಂದ್ರ ಜೈನ್, ಕಾರ್ಯದರ್ಶಿ ಎ.ಕೆ. ರಾವ್, ಉಪಾಧ್ಯಕ್ಷ ಜಯರಾಮ್ ಕೋಟ್ಯಾನ್, ಕೋಶಾಧಿಕಾರಿ ರತ್ನಾಕರ್ ಜೈನ್ ಹಾಗೂ ಸದಸ್ಯರಾದ ದಯಾನಂದ ಶೆಟ್ಟಿಗಾರ್, ಅಬ್ದುಲ್ ರೌವೂಫ್, ರಾಮ ಕೋಟ್ಯಾನ್, ಸೂರಜ್ ಬನ್ನಡ್ಕ ಉಪಸ್ಥಿತರಿದ್ದರು.

ಸಂಚಾಲಕ ಜೆ.ಡಬ್ಲ್ಯೂ ಪಿಂಟೋ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಗಳ ಮುಖ್ಯಸ್ಥರಾದ ರವಿಕುಮಾರ್, ಲಕ್ಷ್ಮಿ ಪಿ. ಮರಾಠೆ ತಿಲಕಾ ಅನಂತವೀರ್ ಜೈನ್ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರಿಸಿದರು. ಡೆಲನ್ ಮಸ್ಕರೇನಸ್ , ನಮೃತಾ ಕಿಣಿ, ವೈಶಾಲಿ ಸಾಧಕರ ಪಟ್ಟಿ ವಾಚಿಸಿದರು. ಜನೆಟ್ ಸ್ಯಾಂಕ್ಟಿಸ್, ಗೋಪಾಲಕೃಷ್ಣ ಜಿ.ಕೆ. ನಿರೂಪಿಸಿದರು. ಗಜಾನನ ಮರಾಠೆ ವಂದಿಸಿದರು.