ಮೂಡುಬಿದಿರೆ: ಯುವ ಉತ್ಸಾಹಿ ಬಳಗ ಕೇಮಾರು, ಯುವಸಂಗಮ ಕಾಂತಾವರ ಇವರ ಜಂಟಿ ಆಶ್ರಯದಲ್ಲಿ ನಾಲ್ಕನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮ ಭಾನುವಾರ ಕೇಮಾರು ಹಕ್ಕೇರಿ ಬಾಕಿಮಾರು ಗದ್ದೆಯಲ್ಲಿ ನಡೆಯಿತು.
ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾಂತಾವರ ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ಭಟ್ ಕೆಸರುಗದ್ದೆಗೆ ಹಾಲು, ತೀರ್ಥ, ತೆಂಗಿನಕಾಯಿ ಅರ್ಪಿಸಿ ಚಾಲನೆ ನೀಡಿದರು. ಸುದರ್ಶನ್ ಆಚಾರ್ಯ ಸ್ವಾಗತಿಸಿದರು. ನಿತಿನ್ ಅಮೀನ್, ಸನತ್ ಆಚಾರ್ಯ ವಾರ್ಷಿಕ ವರದಿ ಮಂಡಿಸಿದರು.
ಕೆಸರುಗದ್ದೆಯಲ್ಲಿ ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಹಗ್ಗಜಗ್ಗಾಟ, ವೈಯಕ್ತಿಕ ಆಟಗಳು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಜೈ ತುಳುನಾಡು ಕಾರ್ಲ ಎಗ್ಗೆ ವತಿಯಿಂದ ತುಳು ಲಿಪಿ ಕಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಂತಾವರ ದೇವಸ್ಥಾನದ ಧರ್ಮದರ್ಶಿ ಬಾರಾಡಿಬೀಡು ಡಾ. ಜೀವಂಧರ್ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ರಶ್ಮಿತಾ ಶೆಟ್ಟಿ, ಕಾಷ್ಠಶಿಲ್ಪ ಕ್ಷೇತ್ರದ ಸಾಧನೆಗಾಗಿ ಶ್ಯಾಮರಾಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಯೇಶ್ ಬಲ್ಲಾಳ್, ಕೆ.ಎಂ.ಎಫ್. ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ, ಅಕ್ರಮ-ಸಕ್ರಮ ಸಮಿತಿ ಸದಸ್ಯ ವಾಸುದೇವ ಪಿ. ನಾಯಕ್, ದಿನೇಶ್ ಪುತ್ರನ್, ಸುದರ್ಶನ್ ಎಂ. ಮೂಡುಬಿದಿರೆ, ಶಾಂತಿಪ್ರಸಾದ್ ಹೆಗ್ಡೆ, ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ಸೇರಿದಂತೆ ಗಣ್ಯರು ಶುಭ ಹಾರೈಸಿದರು. ಧರ್ಮರಾಜ ಕಂಬಳಿ, ಹರೀಶ್ ಎಂ.ಕೆ., ವಿಖ್ಯಾತ್ ಶೆಟ್ಟಿ, ಅವಿನಾಶ್ ಜಿ. ಶೆಟ್ಟಿ, ಸೃಷ್ಟಿ ಉದಯ ಶೆಟ್ಟಿ, ಜಗದೀಶ್ ಅಂಚನ್, ಕಾಳು ಪಾಣಾರ, ರಜತ್ ರಾಮ್ ಮೋಹನ್, ಕಿರಣ್ ಕುಲಾಲ್, ಭರತ್ ಶೆಟ್ಟಿ, ಕುಮಾರ್ ಪ್ರಸಾದ್, ಪ್ರಕಾಶ್ ಕೋಟ್ಯಾನ್, ಜ್ಯೋತಿ ಕೆ., ರೇಣುಕಾ ಅಮೀನ್, ಶಮಾ ಬಲ್ಲಾಳ್, ಮಹಾವೀರ ಜೈನ್, ರಂಜಿತ್ ಶೆಟ್ಟಿ, ನಾಗರಾಜ್ ಪೂಜಾರಿ, ನಾಗೇಶ್ ಅಮೀನ್, ಪ್ರಕಾಶ್ ಬಲಿಪ, ಸೂರಜ್ ಜೈನ್, ಅಭಿಲಾಷ್ ಶೆಟ್ಟಿ, ಅಶ್ವಥ್ ಪಣಪಿಲ, ಪ್ರಕಾಶ್ ಜೆ. ಶೆಟ್ಟಿಗಾರ್, ಅಭಿಲಾಷ್ ಅರ್ಜುನಾಪುರ, ರಾಜೇಶ್ ಕೋಟ್ಯಾನ್, ಪ್ರಭಾಕರ ಕುಲಾಲ್, ಮಹೇಶ್ ಕುಲಾಲ್, ನಿಶಿಲ್ ಶೆಟ್ಟಿ, ಯೋಗೀಶ್ ಆಚಾರ್ಯ, ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಯುವಸಂಗಮ ಕಾಂತಾವರ ಅಧ್ಯಕ್ಷ ವಿಜಯ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸುಕೇಶ್ ಕೋಟ್ಯಾನ್, ಮನೀಶ್ ಕುಲಾಲ್ ನಿರೂಪಿಸಿದರು. ರಿತೇಶ್ ಕೋಟ್ಯಾನ್, ಸಂತೋಷ್ ಆಚಾರ್ಯ ವಂದಿಸಿದರು.