ಮೂಡುಬಿದಿರೆ: ವಾಯ್ಸ್ ಆಪ್ ಆರಾಧನ, ತುಳುನಾಡು ವಾರ್ತೆ ಸಹಯೋಗದಲ್ಲಿ ಮೂಡುಬಿದಿರೆಯಲ್ಲಿ ವಾಯ್ಸ್ ಆಪ್ ಆರಾಧನ ಪ್ರತಿಭೆಗಳ ಮಕ್ಕಳ ಮಂಟಪ ವಿಶೇಷ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಗಿಚ್ಚ್ ಗಿಲಿ ಗಿಲಿ ಜೂನಿಯರ್ ಕಾರ್ಯಕ್ರಮದ ವಿಜೇತೆ ಬಾಲ ಪ್ರತಿಭೆ ಪ್ರಗ್ಯ ಅವರನ್ನು ಸನ್ಮಾನಿಸಲಾಯಿತು.

ವಾಯ್ಸ್ ಆಪ್ ಆರಾಧನ ತಂಡದ ವತಿಯಿಂದ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಾದ ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ಗುರುಪ್ರಸಾದ್, ಪ್ರಮೀಳಾ ಶೆಟ್ಟಿ ಅವರ ಪುತ್ರಿ ಬಹುಮುಖ ಪ್ರತಿಭೆ ಶ್ರೇಯಾ ಸುಳ್ಯ, ಅಲಂಗಾರಿನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಆಶಾ ಸುರೇಂದ್ರ ಪೂಜಾರಿ ದಂಪತಿಯ ಪುತ್ರಿ ಸುನೀಕ್ಷಾ ಪೂಜಾರಿ, ಮಾರ್ನಾಡು, ಮೂಡುಬಿದಿರೆಯ ಜೈನ್ ಹೈಸ್ಕೂಲ್ ವಿದ್ಯಾರ್ಥಿನಿ, ಸುರೇಂದ್ರ, ನಳಿನಿ ದಂಪತಿಯ ಪುತ್ರಿ ಸ್ವಸ್ತಿ ಮೂಡುಬಿದಿರೆ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಾಜೇಶ್ ನಾಯ್ಕ್, ಹರೀಶ್ ಕೋಟ್ಯಾನ್ ಚೌಕಿ ಮಠ, ಪದ್ಮಶ್ರೀ ಭಟ್ ನಿಡ್ಡೋಡಿ, ಡಾ. ಮಂದಾರ ರಾಜೇಶ್ ಭಟ್, ಅರುಣ್ ಶೆಟ್ಟಿಗಾರ್, ಸುರೇಂದ್ರ ಪೂಜಾರಿ ಮಾರ್ನಾಡು, ತುಳುನಾಡು ವಾರ್ತೆ ಸಂಪಾದಕ ಪುನೀತ್ ಕುಮಾರ್ ಮುಂಡ್ಕೂರು, ಪ್ರಫುಲ್ಲಾ, ದೀನ್ ರಾಜ್ ಕೆ, ಅಭಿಷೇಕ್ ಶೆಟ್ಟಿ ಐಕಳ, ಬಸವರಾಜ ಮಂತ್ರಿ, ಪ್ರತಿಭೆಗಳ ಪೋಷಕರು ಉಪಸ್ಥಿತರಿದ್ದರು.

ನಿರೂಪಣೆ ಶ್ರೇಯಾ ಸುಳ್ಯ ನೆರವೇರಿಸಿದರು. ವಂದಿಸಿದರು ಪ್ರಮೀಳಾ ಶೆಟ್ಟಿ ಮೇರ್ಕಜೆ. ಕಾರ್ಯಕ್ರಮದ ಸಂಪೂರ್ಣ ವಿಡಿಯೊವನ್ನು ತುಳುನಾಡು ವಾರ್ತೆ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ.