ಮೂಡುಬಿದಿರೆ: ಇಲ್ಲಿನ ಕನ್ನಡ ಭವನದಲ್ಲಿ ಜೂನ್ 28ರಂದು ನಡೆದ ಇನ್ನರ್ ವೀಲ್ ಡಿಸ್ಟ್ರಿಕ್ಟ್ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’ ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ನೂತನ ಜಿಲ್ಲಾ ಚೇರ್ಮನ್ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ನಡೆಯಿತು.
ಭಾರತದ ಇನ್ನರ್ ವೀಲ್ ಕ್ಲಬ್‌ಗಳ ಅಸೋಸಿಯೇಷನ್ ಅಧ್ಯಕ್ಷೆ ವಿನುತಾ ಹರೀಶ್ ಅವರ ಸಮ್ಮುಖದಲ್ಲಿ ರಜನಿ ಭಟ್ ನೂತನ ಜಿಲ್ಲಾ ಚೇರ್ಮನ್ ಆಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಜಿಲ್ಲಾ ಕಾರ್ಯಕಾರಿ ಸಮಿತಿಯು ಸಹ ಪದಗ್ರಹಣ ಮಾಡಿತು.
ವಿನುತಾ ಹರೀಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಅಸೋಸಿಯೇಷನ್ ಅಧ್ಯಕ್ಷೆ ಇಂಗೆಬೋರ್ಗ್ ವೆಂಡಮನ್ ಅವರ ‘ಗ್ರೋ ಅಂಡ್ ಫ್ಲರಿಷ್’ ಧ್ಯೇಯವಾಕ್ಯದಡಿ ಸಂಸ್ಥೆಯು ಕಾರ್ಯನಿರ್ವಹಿಸಲಿದೆ. ಅಸೋಸಿಯೇಷನ್‌ನ ಮಹತ್ವಾಕಾಂಕ್ಷೆಯ ‘ಫಿಟ್ ಗರ್ಲ್’ ಯೋಜನೆಗೆ ಚಾಲನೆ ನೀಡಲಾಗಿದ್ದು, ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಆದ್ಯತೆ ನೀಡಲಾಗಿದೆ. ಎಂದರು.
ಜಿಲ್ಲಾ ಉಪಾಧ್ಯಕ್ಷೆಯಾಗಿ ಉಮಾ ಮಹೇಶ್, ಅಸೋಸಿಯೇಷನ್ ಕೌನ್ಸಿಲ್ ಸದಸ್ಯೆಯಾಗಿ ಶಬರಿ ಕಡಿದಾಳ್, ಜಿಲ್ಲಾ ಕಾರ್ಯದರ್ಶಿಯಾಗಿ ಅನಿತಾ ಸುರೇಶ್, ಜಿಲ್ಲಾ ಕೋಶಾಧಿಕಾರಿಯಾಗಿ ದೀಪಾ ಭಂಡಾರಿ, ಜಿಲ್ಲಾ ಇಎಸ್‌ಒ ಆಗಿ ವೈಶಾಲಿ ಕುದ್ವಾ, ಜಿಲ್ಲಾ ಸಂಪಾದಕಿಯಾಗಿ ಸಹನಾ ನಾಗರಾಜ್ ಹಾಗೂ ಜಿಲ್ಲಾ ಐಎಸ್‌ಒ ಆಗಿ ದಿವ್ಯ ಮುತ್ತಣ್ಣ ಅವರು ಅಧಿಕಾರ ಸ್ವೀಕರಿದರು.
ರೋಟರಿ ಡಿಸ್ಟ್ರಿಕ್ಟ್ 3182ರ ಜಿಲ್ಲಾ ಗವರ್ನರ್ ಆರ್.ಟಿ.ಎನ್. ಬಿ.ಎಂ. ಭಟ್ ಅವರು ‘ರೋಶ್ನಿ’ ಜಿಲ್ಲಾ ಡೈರೆಕ್ಟರಿ ಬಿಡುಗಡೆಗೊಳಿಸಿದರು.
ಅಸೆಂಬ್ಲಿ ಚೇರ್ಮನ್ ಜಯಶ್ರೀ ಎ. ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಉಮಾ ಮಹೇಶ್, ಅಸೆಂಬ್ಲಿ ಕಾರ್ಯದರ್ಶಿ ಶಾಲಿನಿ ನಾಯಕ್, ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಿಶ್ಮಿತಾ ಶೀನಪ್ಪ ಹಾಗೂ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.