ಮೂಡುಬಿದಿರೆ: ಶ್ರೀ ಮಹಮ್ಮಾಯಿ ಸೇವಾ ಸಮಿತಿ, ಕೋಟೆಬಾಗಿಲು ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ವಿಜಯ ಕುಮಾರ್, ಅಧ್ಯಕ್ಷರಾಗಿ ಹರೀಶ್ಚಂದ್ರ ಹೆಗ್ಡೆ, ಉಪಾಧ್ಯಕ್ಷರಾಗಿ ಸುರೇಶ್ ಹೆಗ್ಡೆ ಕಾಬೆಟ್ಟು ಹಾಗೂ ವಿಶ್ವನಾಥ್ ಕೋಟ್ಯಾನ್, ಕಾರ್ಯದರ್ಶಿಯಾಗಿ ಮಂಜುನಾಥ್, ಜೊತೆ ಕಾರ್ಯದರ್ಶಿಗಳಾಗಿ ಸಂದೀಪ್ ಕುಮಾರ್ ಮತ್ತು ಹರೀಶ್ ಕೋಟ್ಯಾನ್ ಹಾಗೂ ಕೋಶಾಧಿಕಾರಿಯಾಗಿ ಮಣೀಂದ್ರ ಭಟ್ ಆಯ್ಕೆಯಾದರು.

ನಿರ್ಗಮನ ಅಧ್ಯಕ್ಷ ರಾಜೇಶ್ ಕೋಟೆಗಾರ್, ದೇವಸ್ಥಾನದ ಆಡಳಿತ ಮೊಕ್ತೇಸರ ಸೇಸಪ್ಪ ಹೆಗ್ಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.