ಮೂಡುಬಿದಿರೆ: ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ನಿರ್ಮಲಾ ಕಾಮತ್ ಎರಡು ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಅಂಡರ್-19 ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಂಡರ್-19 ತಂಡದ ನಾಯಕಿಯಾಗಿಯೂ ನಿರ್ಮಲಾ ಕಾಮತ್ ತಂಡವನ್ನು ಮುನ್ನಡೆಸಿದ್ದಾರೆ.
ನಿರ್ಮಲಾ ಕಾಮತ್ ಅವರು ಎಸ್. ದಿವಾಕರ್ ಕಾಮತ್ ಹಾಗೂ ಶಕುಂತಲಾ ದಂಪತಿಯ ಪುತ್ರಿ.