ಮೂಡುಬಿದಿರೆ: ಮೆಸ್ಕಾಂ ಮೂಡುಬಿದಿರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಆಗಿ ಕಳೆದ ನಾಲ್ಕೂವರೆ ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮೋಹನ್ ಟಿ. ಅವರನ್ನು ಕಳಸ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಅವರ ಸ್ಥಾನಕ್ಕೆ ಮೂಲ್ಕಿ ಮೆಸ್ಕಾಂ ಉಪವಿಭಾಗದಲ್ಲಿ ಕಳೆದ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಮಕೃಷ್ಣ ಐತಾಳ್ ಅವರನ್ನು ಮೂಡುಬಿದಿರೆ ಉಪವಿಭಾಗದ ನೂತನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ನೇಮಕ ಮಾಡಲಾಗಿದೆ. ಅವರು ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.
ಮೋಹನ್ ಟಿ. ಅವರು ಮೂಡುಬಿದಿರೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಸೇವಾವಧಿಯಲ್ಲಿ ಗ್ರಾಹಕ ಸ್ನೇಹಿ ಹಾಗೂ ಜನಪ್ರಿಯ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.