ಕಾರ್ಕಳ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.
ವರುಣ್ ಸಿ. ಕೆಚ್ಚತ್ತಿ 306 ಅಂಕ, ದರ್ಶನ್ ಎಂ. ಯರಗಲ್ 298, ಅನುರುದ್ಧ ಕೆ.ಕೆ. 280 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಭುವನ್ ಆರ್. ಸಿದ್ದರಾಮ್ 267, ಆದ್ಯ ಎಸ್. ಪಡೇರ್ 260, ಕೆ.ಪಿ. ಸಾಯಿ ಕೃಷ್ಣ 249, ಅಕ್ಷರ ಎಸ್. ನಾಯಕ್ 248, ಪವನ್ ಕುಮಾರ್ ಎಲ್.ಎನ್. 238, ಭುವನ್ ಎಸ್. 227, ಚಿರಾಯು ಎಸ್. ಶೆಟ್ಟಿ 216, ಕೃಷನ್ ಎನ್. 213, ಪೂನಮ್ ಜಿ. 209, ಪ್ರೇರಣಾ ಆರ್. ಹೆಗಡೆ 208, ಹಿತ ರವಿ ಶೆಟ್ಟಿ 206 ಅಂಕ ಗಳಿಸಿ ಅರ್ಹತೆ ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಒಟ್ಟು ಶೇ.14 ಫಲಿತಾಂಶ ದಾಖಲಾಗಿದ್ದರೆ, ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಶೇ.53.84 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ವಿಶೇಷವಾಗಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ, ಪರೀಕ್ಷಾ ಸಂಯೋಜಕ ರಾಘವೇಂದ್ರ ಬಿ. ರಾವ್ ಅಭಿನಂದಿಸಿದ್ದಾರೆ.