ಮೂಡುಬಿದಿರೆ: ಮಾರೂರು ಗ್ರಾಮದ ಗುಡ್ಡಲಂಗಡಿ ಪ್ರದೇಶದ ಬಡ ಕುಟುಂಬವೊಂದಕ್ಕೆ ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಹಾಗೂ ದಾನಿಗಳ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಜುಲೈ 8ರಂದು ನಡೆಯಲಿದೆ.
ಮಾರೂರಿನ ಕುಶಲಕರ್ಮಿ ಸರಸ್ವತಿ ಸದಾಶಿವ ಆಚಾರ್ಯ ಅವರ ಕುಟುಂಬಕ್ಕಾಗಿ ನಿರ್ಮಿಸಲಾದ ಈ ನೂತನ ನಿವಾಸಕ್ಕೆ 'ಶ್ರೀ ಕಾಳಿಕಾಂಬಾ' ಎಂದು ನಾಮಕರಣ ಮಾಡಲಾಗಿದೆ. ಜುಲೈ 8ರಂದು ಸಂಜೆ 3.30ಕ್ಕೆ ಗೃಹ ಹಸ್ತಾಂತರ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಇರುವೈಲು ಕುಮಾರ್ ಪೂಜಾರಿ ಅವರ ನೇತೃತ್ವದಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸಮಾಜಸೇವೆಯ ಸಂಕಲ್ಪ, ವಿವಿಧ ದಾನಿಗಳ ಉದಾರ ಸಹಕಾರ ಹಾಗೂ ಸಂಘಟನೆಗಳ ಸೇವಾಭಾವದ ಫಲವಾಗಿ ಈ ನೂತನ ಆಸರೆ ನಿರ್ಮಾಣಗೊಂಡಿದೆ.
ಈ ಸಾರ್ಥಕ ಕ್ಷಣಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ. ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಹಾಗೂ ಊರಿನ ದಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.