ಮೂಡುಬಿದಿರೆ: ನಿಡ್ಡೋಡಿಯ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಜುಲೈ 5ರಂದು ಬೆಳಗಿನ ಬಲಿಪೂಜೆಯ ಬಳಿಕ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ನಿಡ್ಡೋಡಿ ಘಟಕದ ನೇತೃತ್ವದಲ್ಲಿ 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಚರ್ಚಿನ ಧರ್ಮಗುರು ಲಿಯೋ ವಿಲಿಯಂ ಲೋಬೊ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷೆ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಪ್ರಿಮಾ ಕೊರೆಯಾ, ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷೆ ಸರಿತ ತಾವ್ರೊ, ಕಾರ್ಯದರ್ಶಿ ಜೀವನ್ ಕ್ರಾಸ್ತಾ ಹಾಗೂ ನಿಕಟ ಪೂರ್ವಾಧ್ಯಕ್ಷ ಕಿಶೋರ್ ಡಿಸೋಜಾ ಉಪಸ್ಥಿತರಿದ್ದರು. ಜೀವನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಇಂಜಿನಿಯರಿಂಗ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ರಿಯೋಲಿನ್ ಸಲೋಮಿ ಡಿಸೋಜಾ, ರಿಶಾ ಡಿಸೋಜಾ, ಮರಿಶಾ ಸೆರಾವೊ, ಜೇನ್ ಕಾರ್ಡೊಜಾ, ಜೆನಿಟಾ ತಾವ್ರೊ, ಲಿಯೋನಾ ಡಿಸೋಜಾ, ಆಶೆಲ್ ಲವಿಟಾ ಡಿಸಿಲ್ವ, ಆನ್ಯಾ ಡಿಸೋಜಾ ಹಾಗೂ ಜೋಶ್ವಾ ಡಿಸೋಜಾ ಅವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.