ಮೂಡುಬಿದಿರೆ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನ ಸಮೀಪದ ನಿವಾಸಿ, ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಬಹು ವರ್ಷಗಳ ಕಾಲ ಕ್ಯಾಶಿಯರ್ ಆಗಿದ್ದ ಬಾಲಕೃಷ್ಣ ಕಿಣಿ (64) ಅನಾರೋಗ್ಯದಿಂದ ಸೋಮವಾರ ನಿಧನರಾದರು.ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಕಾಲ ಎಂಸಿಎಸ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ಯಕ್ಷಗಾನದ ಅಭಿಮಾನಿಯಾಗಿದ್ದವರು ಅದರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಯಕ್ಷ ಸಂಗಮದ ಸಕ್ರಿಯ ಸದಸ್ಯರಾಗಿದ್ದವರು ಸಂಸ್ಥೆ ಪೋಷಕರಾಗಿಯೂ ಗುರುತಿಸಿಕೊಂಡಿದ್ದರು. ವೆಂಕರಮಣ ಭಜನಾ ಮಂಡಳಿಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದಾರೆ