ಮೂಡುಬಿದಿರೆ: ಇಲ್ಲಿನ ಬೆಟ್ಕೇರಿ ನಿವಾಸಿ ಹಾಗೂ ಬೈಕಣತಿಕಾರಿ ಬಸದಿಯ ಪ್ರೇಮಾ ಜಯವರ್ಮ ಇಂದ್ರ (78) ಅವರು ಉತ್ತರ ಭಾರತದ ಬದರಿನಾಥ ತೀರ್ಥಯಾತ್ರೆಯ ವೇಳೆ ಸೋಮವಾರ ಬೆಳಗ್ಗೆ ನಿಧನರಾದರು.
ಅವರು ಉತ್ತರ ಭಾರತದ ತೀರ್ಥಕ್ಷೇತ್ರಗಳ ಪ್ರವಾಸದಲ್ಲಿದ್ದ 23 ಮಂದಿ ಯಾತ್ರಾರ್ಥಿಗಳ ತಂಡದಲ್ಲಿದ್ದರು.
ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ ಹರಿದ್ವಾರದಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.