ಮೂಡುಬಿದಿರೆ: ನಮ್ಮ ಕುಡ್ಲ ವಾಹಿನಿಯ ಪ್ರಾಯೋಜಕತ್ವದಲ್ಲಿ ನಡೆದ ನಮ್ಮ ಕುಡ್ಲ ಸೀಸನ್-4 ರಾಜ್ಯ ಮಟ್ಟದ ನೃತ್ಯ ಭಜನಾ ಸ್ಪರ್ಧೆಯಲ್ಲಿ ಮೂಡುಬಿದಿರೆ ಕೋಟೆಬಾಗಿಲು ಮಹಮ್ಮಾಯಿ ಸೇವಾ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದೆ.

19 ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು..

ತಂಡದ ವಿದ್ಯಾರ್ಥಿಗಳಿಗೆ ಅಶೋಕ್ ನಾಯ್ಕ್ ಭಜನಾ ತರಬೇತಿ ನೀಡಿದ್ದಾರೆ.